LATEST NEWS
ಆಗುಂಭೆ ಘಾಟ್ ನಲ್ಲಿ ಭೂಕುಸಿತ – ವಾಹನ ಸಂಚಾರ ಸ್ಥಗಿತ

ಉಡುಪಿ ಜುಲೈ 10: ಆಗುಂಭೆ ಘಾಟ್ ಪ್ರದೇಶಗಳಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಘಾಟಿಯ ಮೂರು ಮತ್ತು ನಾಲ್ಕನೆ ತಿರುವಿನ ಮಧ್ಯದಲ್ಲಿ ಭೂಕುಸಿತ ಸಂಭವಿಸಿದ್ದು. ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
ತಡರಾತ್ರಿ ಭೂಕುಸಿತ ಸಂಭವಿಸಿದ್ದು, ರಾತ್ರಿಯಿಂದಲೇ ವಾಹನ ಸಂಚಾರಕ್ಕೆ ನಿಲ್ಲಿಸಲಾಗಿದ್ದು, ಭಾರೀ ಪ್ರಮಾಣದಲ್ಲಿ ಮಣ್ಣು ರಸ್ತೆಗೆ ಬಿದ್ದಿದೆ. ಮರ ಕೂಡಾ ರಸ್ತೆಗೆ ಉರುಳಿ ಬಿದ್ದಿದೆ. ಹೀಗಾಗಿ ಶಿವಮೊಗ್ಗ, ಆಗುಂಬೆ ಕಡೆಯಿಂದ ಸಿದ್ದಾಪುರ ಮೂಲಕ ಉಡುಪಿಗೆ ವಾಹನಗಳು ಸಂಚರಿಸುತ್ತಿವೆ.

ಇನ್ನು ಭೂಕುಸಿತದ ಬಗ್ಗೆ ಮಾಹಿತಿ ಇಲ್ಲದ ಕಾರಣ ಉಡುಪಿಯಿಂದ ಶಿವಮೊಗ್ಗಕ್ಕೆ ತೆರಳುವ ಬಸ್ ಮತ್ತು ಇತರ ವಾಹನಗಳು ಘಾಟಿ ತಲುಪಿ ವಾಪಸ್ಸಾಗಿವೆ. ಸ್ಥಳಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಮಣ್ಣು ತೆರವು ಕಾರ್ಯಾಚರಣೆ ನಡೆಯುತ್ತಿದೆ