LATEST NEWS
ಮಳೆಗೆ ಮಂಗಳೂರು ವಿಮಾನ ನಿಲ್ದಾಣದ ರನ್ ವೇ ತಡೆಗೊಡೆ ಕುಸಿತ

ಮಳೆಗೆ ಮಂಗಳೂರು ವಿಮಾನ ನಿಲ್ದಾಣದ ರನ್ ವೇ ತಡೆಗೊಡೆ ಕುಸಿತ
ಮಂಗಳೂರು ಜೂನ್ 5: ಮೇ 29 ರಂದು ಮಂಗಳೂರಿನಲ್ಲಿ ಸುರಿದಿದ್ದ ಮಹಾ ಮಳೆಗೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ರನ್ ವೇ ತಡೆಗೊಡೆ ಬಳಿ ಭೂಕುಸಿತ ಉಂಟಾಗಿದೆ.
ಮೇ 29 ರಂದು ಜಿಲ್ಲೆಯಲ್ಲಿ ಸುರಿದಿದ್ದ ಮಹಾಮಳೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಒಂದು ಪಾರ್ಶ್ವದ ತಡೆಗೊಡೆ ಕುಸಿದಿದ್ದು, ರನ್ ವೇ ತಡೆಗೋಡೆ ಬಿರುಕು ಬಿಟ್ಟಿದೆ.

ಸ್ಥಳಕ್ಕೆ ವಿಮಾನ ನಿಲ್ದಾಣದ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದು , ತಡೆಗೊಡೆ ಕುಸಿತದಿಂದ ಯಾವುದೇ ಅಪಾಯ ಇಲ್ಲ ಎಂದು ತಿಳಿಸಿದ್ದಾರೆ. ಈ ಭೂಕುಸಿತದಿಂದ ಅಕ್ಕಪಕ್ಕದ ಗದ್ದೆಗಳಿಗೂ ಹಾನಿಯುಂಟಾಗಿದ್ದು, ವಿಮಾನ ನಿಲ್ದಾಣದಲ್ಲಿ ಸರಿಯಾದ ಡ್ರೈನೇಜ್ ವ್ಯವಸ್ಥೆ ಇಲ್ಲದಿರುವುದು ಈ ಭೂಕುಸಿತಕ್ಕೆ ಕಾರಣ ಎಂದು ಆರೋಪಿಸಿದ್ದಾರೆ.