Connect with us

KARNATAKA

ನಿವೇಶನ, ಮನೆ, ಆಸ್ತಿ, ಸಂಪತ್ತು ಯಾವುದೂ ಕೂಡ ನನ್ನ ಪತಿಯ ಗೌರವಕ್ಕಿಂತ ದೊಡ್ಡದಲ್ಲ : ಸಿಎಂ ಪತ್ನಿ ಪಾರ್ವತಿ ಭಾವನಾತ್ಮಕ ಪತ್ರ

ಬೆಂಗಳೂರು : ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಬಿಎಂ ಪಾರ್ವತಿ ಅವರು, ಮುಡಾದ ಎಲ್ಲಾ 14 ಸೈಟ್ ಗಳ ಕರಪತ್ರಗಳನ್ನು ಹಿಂದಿರುಗಿಸಲು ಬಯಸುತ್ತೇನೆ ಎಂದು ಪತ್ರ ಬರೆದಿದ್ದಾರೆ. ಇದೇ ವೇಳೆ ಅವರ ಭಾವನಾತ್ಮಕ ಪತ್ರ ಕೂಡ ಬಿಡುಗಡೆ ಮಾಡಿದ್ದಾರೆ.

ಹಾಗಾದ್ರೆ ಪತ್ರದಲ್ಲಿ ಏನಿದೆ? ವಿವರ ಇಲ್ಲಿದೆ

ನನ್ನ ಪತಿ ಸಿದ್ದರಾಮಯ್ಯ ಸಣ್ಣ ಕಳಂಕವನ್ನು ಅಂಟಿಸಿಕೊಂಡಿಲ್ಲ. ಸಣ್ಣಕಳಂಕ ಅಂಟಿಸಿಕೊಳ್ಳದೆ ನೈತಿಕತೆ ವ್ರತವನ್ನು ಪಾಲಿಸಿದ್ದಾರೆ. ನಾನೆಂದು ಮನೆ, ಆಸ್ತಿ, ಚಿನ್ನ ಸಂಪತ್ತನ್ನು ಬಯಸಿದವಳು ಅಲ್ಲ. ನನ್ನಿಂದ ಅವರ ರಾಜಕೀಯ ಜೀವನಕ್ಕೆ ಕಳಂಕ ಬರಬಾರದು. ಸಣ್ಣ ಹನಿಯಷ್ಟು ಕಳಂಕ ತಟ್ಟಬಾರದು. ಹೀಗಿದ್ದರು ಮುಡಾ ನಿವೇಶನಕ್ಕೆ ಸಂಬಂಧಪಟ್ಟಂತೆ ಆರೋಪ ಬಂದಿರುವುದಕ್ಕೆ ನಾನು ಘಾಸಿಗೊಂಡಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಪತ್ನಿಯ ಭಾವನಾತ್ಮಕ ಪತ್ರ ಬಿಡುಗಡೆ ಮಾಡಿದ್ದಾರೆ.

ನಿವೇಶನ, ಮನೆ, ಆಸ್ತಿ, ಯಾವುದು ನನ್ನ ಪತಿಯ ಗೌರವ, ಘನತೆ, ಮರ್ಯಾದೆ ಮತ್ತು ಅವರ ನೆಮ್ಮದಿ ಗಿಂತ ದೊಡ್ಡದಲ್ಲ. ಇಷ್ಟು ವರ್ಷ ಅಧಿಕಾರದಲ್ಲಿದ್ದ ಅವರಿಂದ ಏನನ್ನು ನನಗಾಗಲಿ ನನ್ನ ಕುಟುಂಬಕ್ಕೆ ಆಗಲಿ ಬಯಸದ ನನಗೆ, ಈ ನಿವೇಶನ ತೃಣಕ್ಕೆ ಸಮಾನ.ಈ ಹಿನ್ನೆಲೆಯಲ್ಲಿ 14 ನಿವೇಶನ ವಾಪಸ್ ಮಾಡಲು ನಿರ್ಧಾರ ಮಾಡಿದ್ದೇನೆ.ನನ್ನ ಪತಿಯವರ ಅಭಿಪ್ರಾಯ ಏನು ಎನ್ನುವುದು ನನಗೆ ತಿಳಿದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರ ಭಾವನಾತ್ಮಕ ಪತ್ರ ಬಿಡುಗಡೆ ಮಾಡಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *