LATEST NEWS
ಬಿಜೆಪಿ ನಾಯಕಿ ಖುಷ್ಬೂ ಕಾರು ಅಪಘಾತ

ಚೆನ್ನೈ: ಇತ್ತೀಚೆಗಷ್ಟೇ ಕಾಂಗ್ರೇಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದ ಚಿತ್ರನಟಿ ಖುಷ್ಬೂ ಸುಂದರ್ ಅವರ ಕಾರು ತಮಿಳುನಾಡಿನ ಮೆಲ್ಮರುವಾತ್ತೂರ್ ಎಂಬಲ್ಲಿ ಅಪಘಾತಕ್ಕೀಡಾಗಿದೆ.
ಬಿಜೆಪಿ ವೇಲ ಯಾತ್ರೆಯಲ್ಲಿ ಪಾಲ್ಗೊಳ್ಳು ಖುಷ್ಬೂ ತೆರಳುತ್ತಿದ್ದರು ಎನ್ನಲಾಗಿದೆ. ಈ ವೇಳೆ ಎದುರುಗಡೆಯಿಂದ ವೇಗವಾಗಿ ಬಂದ ಟ್ಯಾಂಕರ್ ಖುಷ್ಬೂ ಅವರಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಖುಷ್ಬೂ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೂಡಲೇ ಮಾಹಿತಿ ಅರಿತ ಪೊಲೀಸರು ಘಟನಾ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ಮಾಡಿ, ಕಂಟೈನರ್ ಚಾಲಕನನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಬಿಜೆಪಿ ನಾಯಕಿ, ಕಂಟೈನರ್ ವಾಹನೇ ನಮ್ಮ ವಾಹನಕ್ಕೆ ಗುದ್ದಿದೆ. ನಮ್ಮ ಕಾರು ಸರಿಯಾದ ಮಾರ್ಗದಲ್ಲಿಯೇ ಚಲಿಸುತ್ತಿತ್ತು. ಆದರೆ ಕಂಟೈನರ್ ಏಕಾಏಕಿ ವೇಗವಾಗಿ ಬಂದು ನನ್ನ ಕಾರಿಗೆ ಡಿಕ್ಕಿ ಹೊಡೆದಿದೆ. ಸ್ಥಳಕ್ಕೆ ಪೊಲೀಸರು ಬಂದಿದ್ದು, ತನಿಖೆ ನಡೆಸುತ್ತಿದ್ದಾರೆ ಎಂದು ಬರೆದುಕೊಂಡಿದ್ದಾರೆ.