Connect with us

LATEST NEWS

ಕುಂದಾಪುರ – ಲವ್ ಜಿಹಾದ್ ಪ್ರಕರಣ ಆರೋಪಿ ಅಜೀಜ್ ಪೊಲೀಸ್ ವಶಕ್ಕೆ

ಕುಂದಾಪುರ ಮೇ 30 : ಯುವತಿಯೊಬ್ಬಳನ್ನು ಲೈಂಗಿಕವಾಗಿ ದೌರ್ಜನ್ಯ ನಡೆಸಿ ಯುವತಿ ಆತ್ಮಹತ್ಯೆಗೆ ಕಾರಣವಾದ ಆರೋಪಿಯನ್ನು ಬಂಧಿಸುವಲ್ಲಿ ಕುಂದಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ.


ಉಪ್ಪಿನಕುದ್ರು ಗ್ರಾಮದ 25 ವರ್ಷದ ಹಿಂದೂ ಯುವತಿ ಕೋಟೇಶ್ವರದ ವಿವಾಹಿತ ಅಜೀಜ್ (32) ಎಂಬಾತನ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಳು. ಈ ನಡುವೆ ಅಜೀಜ್ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಅಜೀಜ್‌ ದೈಹಿಕ ಸಂಪರ್ಕ ಬೆಳೆಸಿದ್ದ. ಅಲ್ಲದೆ ವಿಡಿಯೋ ಮಾಡಿಕೊಂಡು ಯುವತಿಯನ್ನು ನಂತರ ಇಸ್ಲಾಂ ಧರ್ಮಕ್ಕೆ ಮತಾಂತವಾಗುವಂತೆ ಒತ್ತಾಯಿಸಿ ಬ್ಲ್ಯಾಕ್ ಮೇಲ್ ಮಾಡಿದ್ದಾನೆ, ಇದರಿಂದ ನೊಂದ ಯುವತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಳು.


ಈ ಹಿನ್ನಲೆ ಹಿಂದೂಪರ ಸಂಘಟನೆಗಳು ಇದೊಂದು ಲವ್ ಜಿಹಾದ್ ಪ್ರಕರಣವಾಗಿದ್ದು, ಆರೋಪಿಯನ್ನು ಬಂಧಿಸಬೇಕೆಂದು ಆಗ್ರಹಿಸಿದರು. ಅಲ್ಲದೆ ಕುಂದಾಪುರದಲ್ಲಿ ನಾಳೆ ಪ್ರತಿಭಟನೆಗೆ ಕರೆ ನೀಡಿದ್ದರು. ಇದೀಗ ಘಟನೆ ನಂತರ ಅಜೀಜ್​ ತಲೆಮರೆಸಿಕೊಂಡಿದ್ದ. ಇದೀಗ ಕೊನೆಗೂ ಅಜೀಜ್‌ ಸಿಕ್ಕಿಬಿದ್ದಿದ್ದಾನೆ. ಆತನನ್ನು ಕುಂದಾಪುರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

Advertisement
Click to comment

You must be logged in to post a comment Login

Leave a Reply