LATEST NEWS
ಕೋಟ – ಶ್ರೀಮಾತಾ ಆಸ್ಪತ್ರೆಯ ಖ್ಯಾತ ಇಎನ್ ಟಿ ತಜ್ಞ ಡಾ. ಸತೀಶ್ ಪೂಜಾರಿ ಹೃದಯಾಘಾತದಿಂದ ನಿಧನ
ಕೋಟ ಜುಲೈ 11: ಕುಂದಾಪುರದ ಶ್ರೀಮಾತಾ ಆಸ್ಪತ್ರೆಯ ಖ್ಯಾತ ಇಎನ್ ಟಿ ತಜ್ಞ ಕಲಾವಿದ ಡಾ. ಸತೀಶ ಪೂಜಾರಿ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 52 ವರ್ಷ ವಯಸ್ಸಾಗಿತ್ತು.
ಕುಂದಾಪುರ ಶ್ರೀಮಾತಾ ಅಸ್ಪತ್ರೆಯ ಆಡಳಿತ ಪಾಲುದಾರ, ಖ್ಯಾತ ಇ.ಎನ್.ಟಿ. ತಜ್ಞ ಡಾ.ಸತೀಶ ಪೂಜಾರಿ ಅವರು ಕೋಟ ಮಣೂರು ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೃತರು, ಪತ್ನಿ, ಪುತ್ರನನ್ನು ಅಗಲಿದ್ದಾರೆ.
ಇವರು ಕುಂದಾಪುರ ಶ್ರೀಮಾತಾ ಆಸ್ಪತ್ರೆ, ಕೋಟ ಮನಸ್ಮಿತಾ ಫೌಂಡೇಶನ್ ಮೊದಲಾದ ಸಂಸ್ಥೆಗಳ ಆಡಳಿತ ಪಾಲುದಾರರಾಗಿದ್ದರು. ಹವ್ಯಾಸಿ ಗಾಯಕರಾಗಿದ್ದ ಇವರು ಹಲವಾರು ಆಲ್ಬಂ ಸಾಂಗ್ ಗಳಿಗೆ, ಭಕ್ತಿಗೀತೆಗಳಿಗೆ ಧ್ವನಿಯಾಗಿದ್ದರು. ಸಂಗೀತ ರಸಮಂಜರಿಗಳಲ್ಲೂ ಕಾರ್ಯಕ್ರಮ ನೀಡಿದ್ದಾರೆ. ಡಾ. ಎಸ್. ಜಾನಕಿ ಅವರ ಕಟ್ಟಾ ಅಭಿಮಾನಿಯಾಗಿ ಪ್ರತಿ ವರ್ಷ ಕೋಟೇಶ್ವರದಲ್ಲಿ ಡಾ. ಎಸ್. ಜಾನಕಿ ರಾಷ್ಟ್ರೀಯ ಪುರಸ್ಕಾರ ಆಯೋಜಿಸಿ ನಾಡಿನ ಹಲವು ಮಂದಿ ಗಣ್ಯ ಹಾಡುಗಾರರಿಗೆ ಪ್ರಶಸ್ತಿ ಪ್ರದಾನ ಮಾಡಿದ್ದರು. ಮನಸ್ಮಿತಾ ಫೌಂಡೇಶನ್ ಮೂಲಕ ಸಮಾಜ ಸೇವೆಯಲ್ಲೂ ತೊಡಗಿಕೊಂಡಿದ್ದರು.