KARNATAKA
ಕುಮಟಾ – ಸಮುದ್ರದಲ್ಲಿ ಈಜಲು ಹೋದ ನಾಲ್ವರು ವಿಧ್ಯಾರ್ಥಿಗಳು ನೀರುಪಾಲು
ಕುಮಟಾ ಜೂನ್ 25: ಸಮುದ್ರದಲ್ಲಿ ಈಜಲು ತೆರಳಿದ ನಾಲ್ವರು ವಿಧ್ಯಾರ್ಥಿಗಳು ನೀರು ಪಾಲಾದ ಘಟನೆ ಕುಮಟಾ ತಾಲ್ಲೂಕಿನ ಬಾಡದ ಬಳಿ ಶನಿವಾರ ನಡೆದಿದೆ.
ಇಬ್ಬರ ಮೃತದೇಹಗಳು ಸಿಕ್ಕಿದ್ದು, ಇನ್ನಿಬ್ಬರಿಗೆ ಹುಡುಕಾಟ ಮುಂದುವರಿದಿದೆ. ಮೃತರನ್ನು ಬೆಂಗಳೂರಿನ ಕಸ್ತೂರಬಾ ನಗರದ ಅರ್ಜುನ್ (23) ಹಾಗೂ ಪೀಣ್ಯದ ಚೈತ್ರಶ್ರೀ (27) ಎಂದು ಗುರುತಿಸಲಾಗಿದೆ. ರಾಜಾಜಿನಗರದ ತೇಜಸ್.ಡಿ (22) ಹಾಗೂ ಕನಕಪುರ ರಸ್ತೆಯ ಕಿರಣಕುಮಾರ (27) ಎಂಬುವವರಿಗೆ ಶೋಧ ಕಾರ್ಯ ಮಾಡಲಾಗುತ್ತಿದೆ. ಬೆಂಗಳೂರಿನಿಂದ 85 ಮಂದಿ ತಂಡ ಪ್ರವಾಸಕ್ಕೆ ಬಂದಿದ್ದು, ಸಿಲ್ವರ್ ಸ್ಯಾಂಡ್ ಬೀಚ್ ರೆಸಾರ್ಟ್ ನಲ್ಲಿ ಸಮುದ್ರಕ್ಕಿಳಿದು ಆಟವಾಡಲು ಕೆಲವು ವಿಧ್ಯಾರ್ಥಿಗಳು ತೆರಳಿದ್ದರು, ಮಳೆಗಾಲದ ಹಿನ್ನಲೆ ಸಮುದ್ರದ ಅಬ್ಬರ ಹೆಚ್ಚಾಗಿದ್ದು, ಈ ವೇಳೆ ನಾಲ್ವರು ವಿಧ್ಯಾರ್ಥಿಗಳು ಸಮುದ್ರದ ಅಲೆಗೆ ಸಿಲುಕಿ ಕೊಚ್ಚಿ ಹೋಗಿದ್ದಾರೆ. ಘಟನೆಯಲ್ಲಿ ಇಬ್ಬರ ಮೃತದೇಹ ಪತ್ತೆಯಾಗಿದ್ದು, ಉಳಿದ ಇಬ್ಬರ ಮೃತದೇಹಕ್ಕೆ ಶೋಧ ಕಾರ್ಯ ಮುಂದುವರೆದಿದೆ.