LATEST NEWS
ಕುಮಟಾ : ಲಾರಿ ಮತ್ತು ಕಾರ್ ಮುಖಾಮುಖಿ ಡಿಕ್ಕಿ, ಓರ್ವ ಸಾವು, ಮತ್ತೋರ್ವ ಗಂಭೀರ ಗಾಯ

ಬೈಂದೂರು ಅಕ್ಟೋಬರ್ 3 : ಲಾರಿ ಮತ್ತು ಕಾರ್ ಮುಖಾಮುಖಿ ಡಿಕ್ಕಿ ಕುಮಟಾ ರಾಷ್ಟ್ರೀಯ ಹೆದ್ದಾರಿ ಅವಘಡ ಸಂಭವಿಸಿದೆ, ಕಾರ್ ಮುಂಭಾಗ ಸಂಪೂರ್ಣ ಹಾನಿ ಸಂಭವಿಸಿದೆ.
ಲಾರಿ ಮಂಗಳೂರಿನಿಂದ ಹುಬ್ಬಳ್ಳಿ ಕಡೆ, ಕಾರು ಹುಬ್ಬಳ್ಳಿ ಯಿಂದ ಬೈಂದೂರು ಕಡೆಗೆ ಬರುತ್ತಿದ್ದ ವೇಳೆ ಘಟನೆ ಸಂಭವಿಸಿದೆ. ಕಾರಿನಲ್ಲಿದ್ದ ಮಂಜುನಾಥ ಆಚಾರ್ಯ ಕಾಲ್ತೋಡು (33) ಸ್ಥಳದಲ್ಲೇ ಮೃತಪಟ್ಟಿದ್ದಾರೆ, ಕಾರಿನಲ್ಲಿದ್ದ ಷಮತ್ತೋರ್ವ ಸವಾರ ರವಿಕಾಂತ್ ಆಚಾರ್ಯ (30) ಗಂಭೀರ ಗಾಯಗೊಂಡು, ಕುಂದಾಪುರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
