Connect with us

DAKSHINA KANNADA

ರಾಜ್ಯದ ಶ್ರೀಮಂತ ದೇಗುಲ ಆಡಳಿತ‌ ವ್ಯವಸ್ಥೆಯ ಗೊಂದಲಕ್ಕೆ ತೆರೆ, ಕುಕ್ಕೆ ಸುಬ್ರಹ್ಮಣ್ಯ ಅಭಿವೃದ್ಧಿ ಸಮಿತಿ ಅಸ್ತಿತ್ವಕ್ಕೆ

ಮಂಗಳೂರು ಅಕ್ಟೋಬರ್ 30: ಕೊನೆಗೂ ರಾಜ್ಯದ ಶ್ರೀಮಂತ ದೇಗುಲವಾದ ದಕ್ಷಿಣಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯದ ಆಡಳಿತಕ್ಕೆ ಸಂಬಂಧಿಸಿದ ವಿವಾದ ಅಂತ್ಯಗೊಂಡಿದೆ. ರಾಜ್ಯ ಸರಕಾರ ರಾಜ್ಯ ಧಾರ್ಮಿಕ ಧತ್ತಿ ಇಲಾಖೆ ಮೂಲಕ ಕುಕ್ಕೆ ಸುಬ್ರಹ್ಮಣ್ಯ ಕ್ಕೆ ಅಭಿವೃದ್ಧಿ ಸಮಿತಿಯನ್ನು ನೇಮಿಸುವ ಮೂಲಕ ಎಲ್ಲಾ ವಿವಾದಗಳಿಗೆ ತೆರೆ ಎಳೆದಿದೆ.


ರಾಜ್ಯದ ಅತ್ಯಂತ ಶ್ರೀಮಂತ ದೇವಾಲಯ ಎಂದೇ ಗುರುತಿಸಿಕೊಂಡಿರುವ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ವ್ಯವಸ್ಥಾಪನಾ ಸಮಿತಿ ಅವಧಿ ಮುಗಿದು ಒಂದು ವರ್ಷ ಪೂರ್ಣಗೊಂಡಿತ್ತು. ದೇಗುಲದಲ್ಲಿ ನೂತನ ಆಡಳಿತ ಸಮಿತಿ ನೇಮಕಾತಿ ವಿಚಾರ ಆಗಾಗ್ಗೆ ಪ್ರಸ್ತಾಪವಾಗುತ್ತಾದರೂ ಸರಕಾರ ಮಾತ್ರ ಈ ಬಗ್ಗೆ ಸಮರ್ಪಕವಾದ ತೀರ್ಮಾನ ಈವರಗೂ ತೆಗೆದುಕೊಂಡಿರಲಿಲ್ಲ. ಈ ವಿಳಂಬಕ್ಕೆ ಕಾರಣ ಕ್ಷೇತ್ರದಲ್ಲಿ ವ್ಯವಸ್ಥಾಪನಾ ಸಮಿತಿ ಬದಲಿಗೆ ಅಭಿವೃದ್ಧಿ ಸಮಿತಿ ಅಥವಾ ಪ್ರಾಧಿಕಾರ ರಚಿಸಲು ಸರಕಾರ ನಿರ್ಧರಿಸಿದೆ ಎನ್ನುವ ಸೂಚನೆಯನ್ನು ಸರಕಾರ ಈ ಹಿಂದೆಯೇ ನೀಡಿತ್ತು. ಈ ಕಾರಣದಿಂದಲೇ ದೇವಸ್ಥಾನದಲ್ಲಿ .


ಪ್ರಸ್ತುತ ವ್ಯವಸ್ಥಾಪನ ಸಮಿತಿಯ ಆಯ್ಕೆಯ ಪ್ರಕ್ರಿಯೆಗಳು ಸ್ಥಗಿತಗೊಂಡಿತ್ತು. ಆದುದರಿಂದ ಕುಕ್ಕೆಗೆ ಮುಂದೆ ಅಭಿವೃದ್ಧಿ ಸಮಿತಿಯೋ ಅಥವಾ ಪ್ರಾಧಿಕಾರವೋ ಎನ್ನುವ ಕ್ಷೇತ್ರದ ಭಕ್ತರ ಮುಂದಿದ್ದ ಗೊಂದಲಕ್ಕೆ ಸರಕಾರ ಇದೀಗ ಸ್ಪಷ್ಟತೆ ನೀಡಿದೆ.
ಸುಬ್ರಹ್ಮಣ್ಯ ಕ್ಷೇತ್ರವನ್ನು ಪ್ರಾಧಿಕಾರ ಮಾಡಬೇಕೆಂಬ ಚಿಂತನೆಯ ಬಗ್ಗೆ ಇಲಾಖೆ, ಅಧಿಕಾರಿಗಳ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಇದರ ಮುಂದುವರೆದ ಭಾಗವಾಗಿ ಸದ್ಯ ಪ್ರಾಧಿಕಾರ ರಚಿಸದೆ ಅಭಿವೃದ್ಧಿ ಸಮಿತಿ ರಚಿಸಲು ಸರಕಾರ ನಿರ್ಧರಿಸಿತ್ತು.
ಸದ್ಯ ನೇಮಕವಾಗಿರುವ ಸಮಿತಿಯಲ್ಲಿ ಐವರು ಸದಸ್ಯರು ಇರಲಿದ್ದು, ಪ್ರಾಧಿಕಾರ ರಚನೆ ಆಗುವಲ್ಲಿ ವರೆಗೆ ಕ್ಷೇತ್ರದ ಆಡಳಿತ, ಅಭಿವೃದ್ಧಿ ಕೆಲಸಗಳ ಬಗ್ಗೆ ಈ ಸಮಿತಿ ಜವಬ್ದಾರಿ ವಹಿಸಿಕೊಳ್ಳಲಿದೆ. ಸರಕಾರ ಇದೀಗ ಈ ಸದಸ್ಯರ ಪಟ್ಟಿಯನ್ನು ಬಿಡುಗಡೆಮಾಡಿದ್ದು, ಪಿ‌.ಜಿ.ಎಸ್.ಪ್ರಸಾದ್, ಕೃಷ್ಣ ಶೆಟ್ಟಿ, ಪ್ರಸನ್ನ ತಣೀರುಪಂಥ, ಎಸ್.ಮೋಹನರಾಮ,ವನಜಾ ಭಟ್ ಸುಬ್ರಹ್ಮಣ್ಯ ಹಾಗೂ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಕಾರ್ಯನಿರ್ವಹಣಾಧಿಕಾರಿಗಳು ಈ ಸಮಿತಿಯ ಸದಸ್ಯರಾಗಿದ್ದಾರೆ. ಆಯ್ಕೆಯಾದ ಈ ಸದಸ್ಯರು ಮೂರು ವರ್ಷಗಳ ಕಾಲ ಅಭಿವೃದ್ಧಿ ಸಮಿತಿಯ ಸದಸ್ಯರಾಗಿರಲಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *