Connect with us

    DAKSHINA KANNADA

    ನಾಗಕ್ಷೇತ್ರ ಕುಕ್ಕೆಯಲ್ಲೇ ನಾಗರಹಾವಿನ ಅಂತ್ಯಸಂಸ್ಕಾರಕ್ಕೆ ಸಿಗದ ಸಿಬ್ಬಂದಿ – ಮೃತಪಟ್ಟ ನಾಗರಹಾವನ್ನು ದೇವಸ್ಥಾನದ ಆಡಳಿತ ಕಛೇರಿ ಎದುರಿಗಿಟ್ಟು ಪ್ರತಿಭಟನೆ

    ಪುತ್ತೂರು ಜುಲೈ 12: ದೇಶದ ಪ್ರಸಿದ್ದ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮೃತಪಟ್ಟ ನಾಗರಹಾವಿನ ಅಂತ್ಯಸಂಸ್ಕಾರಕ್ಕೆ ಸ್ಪಂದನೆ ದೊರಕದೆ ಭಕ್ತಾಧಿಗಳು ಮೃತಪಟ್ಟ ನಾಗರಹಾವನ್ನು ದೇವಸ್ಥಾನದ ಆಡಳಿತ ಕಛೇರಿ ಎದುರಿಗಿಟ್ಟು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.


    ಕುಕ್ಕೆ ಸುಬ್ರಹ್ಮಣ್ಯ ಸಮೀಪದ ರಸ್ತೆಯಲ್ಲಿ ವಾಹನದಡಿಗೆ ಬಿದ್ದು ನಾಗರಹಾವೊಂದು ಸಾವನಪ್ಪಿತ್ತು. ಈ ವಿಚಾರವನ್ನು ಸ್ಥಳೀಯರು ಕುಕ್ಕೆಸುಬ್ರಹ್ಮಣ್ಯ ದೇವಸ್ಥಾನದ ಸಿಬ್ಬಂದಿಗಳಿಗೆ ತಿಳಿಸಿದ್ದರು. ಹಾವು ಸತ್ತ ತಕ್ಷಣ ಅದಕ್ಕೆ ಅಂತ್ಯಸಂಸ್ಕಾರ ಮಾಡಬೇಕು ಎನ್ನುವ ಪದ್ಧತಿ ಇರುವ ಕಾರಣ ದೇವಳದ ಸಿಬ್ಬಂದಿಗಳಿಗೆ ವಿಚಾರವನ್ನು ಸ್ಥಳೀಯರು ತಿಳಿಸಿದ್ದರು. ಆದರೆ ದೇವಾಲಯದ ಸಿಬ್ಬಂದಿ ಹಾವು ಸತ್ತು ಒಂದು ಗಂಟೆಯಾದರೂ ಸ್ಥಳಕ್ಕೆ ಆಗಮಿಸದೆ ಅಸಡ್ಡೆ ತೋರಿದ್ದಾರೆ.

    ಇದರಿಂದ ರೊಚ್ಚಿಗೆದ್ದ ಸ್ಥಳೀಯರು ಸಾವನಪ್ಪಿದ ಹಾವನ್ನು ಸೀದಾ ಕುಕ್ಕೆ ದೇವಸ್ಥಾನದ ಆಡಳಿತ ಕಛೇರಿ ಎದುರಿಗಿಟ್ಟು ಪ್ರತಿಭಟನೆ ನಡೆಸಿದ್ದಾರೆ. ಸರ್ಪಸಂಸ್ಕಾರ ವಿಧಿಗೆ ಹಣ ಕೊಟ್ಟರೆ ಮಾತ್ರ ಅರ್ಚಕರು ಸಿಗುತ್ತಾರೆ, ಆದರೆ ಕ್ಷೇತ್ರದಲ್ಲಿ ಆರಾಧಿಸಲ್ಪಡುವ ನಾಗನೇ ಸತ್ತು ಬಿದ್ದಾಗ ನಿಮಗೆ ಅರ್ಚಕರು ಸಿಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಜನರು, ನಾಗದೇವರ ಅನ್ನ ತಿಂದೇ ಇಲ್ಲಿ ಎಲ್ಲರೂ ಬದುಕುತ್ತಿರುವುದು, ಆದರೆ ನಾಗನಿಗೆ ಅಂತ್ಯಸಂಸ್ಕಾರ ನಡೆಸಲು ಮಾತ್ರ ಯಾರೂ ಇಲ್ಲ ಎಂದು ಸಿಬ್ಬಂದಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ದೇವಸ್ಥಾನದಲ್ಲಿ ಇಷ್ಟೆಲ್ಲಾ ಸಿಬ್ಬಂದಿಗಳು ಇರೋದು ಯಾಕೆ ಎಂದು ಕ್ಷೇತ್ರದ ಸಿಬ್ಬಂದಿಗಳ ವಿರುದ್ದ ಸ್ಥಳೀಯರು ಹರಿಹಾಯ್ದಿದ್ದಾರೆ.

    ಕೊನೆಗೆ ಪುತ್ತೂರು ಸಹಾಯಕ ಆಯುಕ್ತರಿಗೆ ಕರೆ ಮಾಡಿದಾಗ ಅವರು ಸ್ಪಂದಿಸಿದ್ದಾರೆ. ಸಹಾಯಕ ಆಯುಕ್ತರ ಆದೇಶದ ಬಳಿಕವೇ ನಾಗನಿಗೆ ಅಂತ್ಯಸಂಸ್ಕಾರ ಅರ್ಚಕರು ನೇರವೇರಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply