DAKSHINA KANNADA
ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಅನ್ನದಾನಕ್ಕೆ ಒಂದು ಕೋಟಿ ನೀಡಿದ ತೆಲಂಗಾಣದ ಸಚಿವ
ಸುಳ್ಯ ಡಿಸೆಂಬರ್ 20: ದಕ್ಷಿಣ ಭಾರತದ ಹೆಸರಾಂತ ನಾಗ ಕ್ಷೇತ್ರ ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಾಲಯದ ಅನ್ನದಾನಕ್ಕೆ ತೆಲಂಗಾಣ ಸರ್ಕಾರದ ಕಂದಾಯ ಸಚಿವ ಪೊಂಗುಲೆಟಿ ಶ್ರೀನಿವಾಸ ರೆಡ್ಡಿ ಒಂದು ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ.
ಕುಕ್ಕೆ ಸುಬ್ರಹ್ಮಣ್ಯನಲ್ಲಿ ಪ್ರಾರ್ಥಿಸಿ ಇಷ್ಟಾರ್ಥ ಸಿದ್ಧಿಯಾದ ಹಿನ್ನಲೆಯಲ್ಲಿ ಸಚಿವರು ಕುಕ್ಕೆ ಸುಬ್ರಹ್ಮಣ್ಯ ದ ಅನ್ನದಾನ ಸೇವೆಯಾರ್ಥವಾಗಿ ಒಂದು ಕೋಟಿ ರೂಪಾಯಿ ಚೆಕ್ ಅನ್ನು ದೇಗುಲದ ವ್ಯವಸ್ಥಾಪನಾ ಸಮಿತಿಗೆ ಹಸ್ತಾಂತರಿಸಿದ್ದಾರೆ.
ತಮ್ಮ ಮಗಳ ಮದುವೆಗಾಗಿ ಮಾಡಿದ ಪ್ರಾರ್ಥನೆ ಫಲಿಸಿದ ಕಾರಣ ಈ ಸೇವೆ ಪೂರೈಸಿದ್ದಾರೆ. ತೆಲಂಗಾಣದ ಸಚಿವ ಶ್ರೀನಿವಾಸ ರೆಡ್ಡಿ ಇಂದು ಕುಟುಂಬ ಸಮೇತ ಸುಬ್ರಹ್ಮಣ್ಯಕ್ಕೆ ಬಂದು ತಮ್ಮ ಭಕ್ತಿಯನ್ನು ಮೆರೆದಿದ್ದಾರೆ. ಈ ಸಂದರ್ಭ ಅವರೊಂದಿಗೆ ಮಗಳು, ಅಳಿಯ, ಸಹೋದರ ಹಾಗೂ ತಿರುಪತಿಯಲ್ಲಿ ಪ್ರೋಫೆಸರ್ ಆಗಿರುವ ಗಣಪತಿ ಭಟ್ ಉಪಸ್ಥಿತರಿದ್ದರು.
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಂ ಸುಳ್ಳಿ, ಕಾರ್ಯನಿರ್ವಹಣಾಧಿಕಾರಿ ಡಾl ನಿಂಗಯ್ಯ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪಿ.ಜಿ.ಎಸ್.ಎನ್ ಪ್ರಸಾದ್, ಪ್ರಸನ್ನ ದರ್ಭೆ, ಶ್ರೀವತ್ಸಾ, ಲೋಕೇಶ್ ಮುಂಡಕಜೆ, ಶೋಭಾ ಗಿರಿಧರ್, ವನಜಾ ಭಟ್ ಮತ್ತಿತರಿದ್ದು ಚೆಕ್ ಸ್ವೀಕರಿಸಲಾಯಿತು.