Connect with us

LATEST NEWS

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ರಾಜ್ಯದ ಅತೀ ಶ್ರೀಮಂತ ದೇವಸ್ಥಾನ

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ರಾಜ್ಯದ ಅತೀ ಶ್ರೀಮಂತ ದೇವಸ್ಥಾನ

ಮಂಗಳೂರು ಜೂನ್ 28: ರಾಜ್ಯದ ಶ್ರೀಮಂತ ದೇವಾಲಯಗಳ ಪಟ್ಟಿಯನ್ನು ಮುಜರಾಯಿ ಇಲಾಖೆ ಬಿಡುಗಡೆ ಮಾಡಿದ್ದು , ದಕ್ಷಿಣಕನ್ನಡ ಜಿಲ್ಲೆಯ ಹೆಸರಾತ ನಾಗ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ.

ರಾಜ್ಯದ ದೇವರುಗಳಲ್ಲಿ ಶ್ರೀಮಂತ ದೇವರ ಪಟ್ಟಿಯನ್ನು ಮುಜರಾಯಿ ಇಲಾಖೆ ಇಂದು ಬಿಡುಗಡೆ ಮಾಡಿದೆ. ದೇವಸ್ಥಾನಗಳ ಹುಂಡಿಯಲ್ಲಿ ಸಂಗ್ರಹವಾಗುವ ಹಣದ ಆಧಾರದ ಮೇಲೆ ಅತೀ ಶ್ರೀಮಂತ ದೇವಾಲಯಗಳ ಪಟ್ಟಿಯನ್ನು ಮಾಡಲಾಗುತ್ತದೆ. ಈ ಪಟ್ಟಿಯಲ್ಲಿ ಕರಾವಳಿಯ ಎರಡು ದೇವಸ್ಥಾನಗಳು ಮೊದಲನೇ ಮತ್ತು ಎರಡನೇ ಸ್ಥಾನವನ್ನು ಪಡೆದುಕೊಂಡಿವೆ.

ಸುಮಾರು 95 ಕೋಟಿ ರೂಪಾಯಿ ಹಣವನ್ನು ಸಂಗ್ರಹಿಸುವ ಮೂಲಕ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಪ್ರಥಮ ಸ್ಥಾನ ಪಡೆದಿದ್ದು, 43 ಕೋಟಿ ರೂಪಾಯಿ ಹಣ ಸಂಗ್ರಹಿಸುವ ಮೂಲಕ ಕೊಲ್ಲೂರು ದೇವಸ್ಥಾನ ಎರಡನೇ ಸ್ಥಾನವನ್ನು ಪಡೆದಿದೆ. ಮೈಸೂರಿನ ಚಾಮುಂಡೇಶ್ವರಿ ದೇವಾಲಯ ತೃತೀಯ ಸ್ಥಾನದಲ್ಲಿದೆ. ದಾಖಲೆಯ ಮಟ್ಟದಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಾಸ್ಥಾನದಲ್ಲಿ ಹುಂಡಿಯ ದುಡ್ಡು ಸಂಗ್ರಹವಾಗಿದೆ. ಇನ್ನು ಕಟೀಲು ದುರ್ಗಾಪರಮೇಶ್ವರಿ ನಾಲ್ಕನೆಯ ಸ್ಥಾನದಲ್ಲಿದ್ದರೆ, ನಂಜನಗೂಡಿನ ಶ್ರೀಕಂಠೇಶ್ವರಸ್ವಾಮಿ ದೇವಾಸ್ಥಾನ ಐದನೆಯ ಶ್ರೀಮಂತ ದೇವಸ್ಥಾನವಾಗಿದೆ.

ಬೆಂಗಳೂರಿನ ಬನಶಂಕರಿ ದೇಗುಲ ಒಂಬತ್ತನೇಯ ಶ್ರೀಮಂತ ದೇವಸ್ಥಾನವಾಗಿದೆ. ಇನ್ನು ದೇಗುಲದದಲ್ಲಿ ಸಂಗ್ರಹವಾದ ಹುಂಡಿ ಹಣದಲ್ಲಿ ಶೇ.60ರಷ್ಟು ದೇಗುಲದ ಅಭಿವೃದ್ಧಿಗೆ ಬಳಸಲಾಗಿದೆ ಅಂತಾ ಮುಜರಾಯಿ ಲೆಕ್ಕ ಕೊಟ್ಟಿದೆ.

1. ಕುಕ್ಕೆ ಸುಬ್ರಹ್ಮಣ್ಯ – 95,92,54,363 ರೂ.
2. ಕೊಲ್ಲೂರು ಮೂಕಾಂಬಿಕೆ – 43,92,09,926 ರೂ.
3. ಚಾಮುಂಡೇಶ್ವರಿ ದೇಗುಲ – 30,40,07,300 ರೂ.
4. ದುರ್ಗಾಪರಮೇಶ್ವರಿ ದೇಗುಲ-23,91,59,886 ರೂ.
5. ಶ್ರೀಕಂಠೇಶ್ವರ ನಂಜನಗೂಡು-19,98,16,618.65 ರೂ.
6. ಬೆಂಗಳೂರು ಬನಶಂಕರಿ- 8,53,77,373 ರೂ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *