DAKSHINA KANNADA
ನವೆಂಬರ್ 23 ರಂದು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಲಕ್ಷ ದೀಪೋತ್ಸವ
ಪುತ್ತೂರು ನವೆಂಬರ್ 14: ರಾಜ್ಯದ ಖ್ಯಾತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಲ್ಲಿ ಚಂಪಾಷಷ್ಠಿ ಮಹೋತ್ಸವ ಪ್ರಯುಕ್ತ ನವೆಂಬರ್ 23ರಂದು ಲಕ್ಷ ದೀಪೋತ್ಸವ ನಡೆಯಲಿದೆ. ಈ ಬಾರಿ ಈ ವೇಳೆ ಕುಣಿತ ಭಜನೆಯನ್ನು ಏರ್ಪಡಿಸಲಾಗಿದೆ.
ನವೆಂಬರ್ 21 ರ ಕಾರ್ತಿಕ ದ್ವಾದಶಿಯಂದು ಚಂಪಾಷಷ್ಠಿ ಮಹೋತ್ಸವಕ್ಕೆ ಕೊಪ್ಪರಿಗೆ ಏರುವ ಮೂಲಕ ಚಾಲನೆ ಲಭಿಸಲಿದೆ. ಡಿ.5 ಮಾರ್ಗಶಿರ ಶುದ್ಧ ದ್ವಾದಶಿಯಂದು ಬೆಳಿಗ್ಗೆ ಕೊಪ್ಪರಿಗೆ ಇಳಿದು, ರಾತ್ರಿ ನೀರು ಬಂಡಿ ಉತ್ಸವ, ದೈವಗಳ ನಡಾವಳಿ ನಡೆಯುವುದರೊಂದಿಗೆ ಸಂಪನ್ನಗೊಳ್ಳಲಿದೆ’ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ ರಾಂ ಸುಳ್ಳಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಲಕ್ಷ ದೀಪೋತ್ಸವದ ದಿನ ಸಂಜೆ 7ರಿಂದ ದೇವಳದ ರಾಜಗೋಪುರದ ಬಳಿಯಿಂದ ರಥಬೀದಿ, ಅಡ್ಡಬೀದಿ, ಕಾಶಿಕಟ್ಟೆಯಾಗಿ ಕುಮಾರಧಾರಾದವರೆಗೆ ಕುಣಿತ ಭಜನೆ ಆಯೋಜಿಸಲಾಗಿದೆ. ಕುಣಿತ ಭಜನೆಯಲ್ಲಿ 1 ಸಾವಿರ ತಂಡಗಳು ಭಾಗವಹಿಸುವ ನಿರೀಕ್ಷೆ ಇದೆ. ಭಾಗವಹಿಸುವ ತಂಡಗಳು ನ. 20 ಒಳಗಾಗಿ ದೇವಳದ ಕಚೇರಿಯಲ್ಲಿ ಹೆಸರು ನೊಂದಾಯಿಸಿಕೊಳ್ಳಬೇಕು. ಮಾಹಿತಿಗೆ: 9482646275, ಸಂಪರ್ಕಿಸಬಹುದು ಅಥವಾ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ನೊಂದಾಯಿಸಿಕೊಳ್ಳಬಹುದು’ ಎಂದರು.