LATEST NEWS
ಹಣ ಮಾಡಲು ಹೊರಟ ವಿಮಾನ ಸಂಸ್ಥೆಗಳಿಗೆ ಸೆಡ್ಡು ಹೊಡೆದ ಕೆಎಸ್ ಆರ್ ಟಿಸಿ
ಹಣ ಮಾಡಲು ಹೊರಟ ವಿಮಾನ ಸಂಸ್ಥೆಗಳಿಗೆ ಸೆಡ್ಡು ಹೊಡೆದ ಕೆಎಸ್ ಆರ್ ಟಿಸಿ
ಮಂಗಳೂರು ಅಗಸ್ಟ್ 18: ಮಂಗಳೂರು ಅಗಸ್ಟ್ 18 ಕರಾವಳಿಯಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಮಂಗಳೂರು ಬೆಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಗಳು ಬಂದ್ ಆಗಿರುವ ಲಾಭವನ್ನು ಪಡೆಯಲೆತ್ನಿಸುತ್ತಿರುವ ಖಾಸಗಿ ವಿಮಾನ ಸಂಸ್ಥೆಗಳಿಗೆ ಕೆಎಸ್ ಆರ್ ಟಿಸಿ ಸೆಡ್ಡು ಹೊಡೆಯಲು ಮುಂದಾಗಿದೆ.
ಜನರ ಅಸಹಾಯಕತೆಯನ್ನೆ ಬಳಸಿಕೊಂಡು ಹಣ ಮಾಡಲು ಹೊರಟ ಈ ವಿಮಾನ ಯಾನ ಸಂಸ್ಥೆಗೆಳು ಮಂಗಳೂರು – ಬೆಂಗಳೂರು ನಡುವೆ ಯಾನಕ್ಕೆ ಜನರಿಂದ 5 ಪಟ್ಟು ಹೆಚ್ಚು ಹಣ ವಸೂಲು ಮಾಡುತ್ತಿವೆ. ಟಿಕೇಟ್ ಒಂದಕ್ಕೆ 10 ರಿಂದ 15 ಸಾವಿರದ ವರೆಗೆ ಈ ಖಾಸಗಿ ವಿಮಾನ ಯಾನ ಸಂಸ್ಥೆಗೆಳು ವಸೂಲು ಮಾಡುತ್ತಿವೆ.
ಈ ಹಿನ್ನೆಲೆಯಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಕೆ ಎಸ್ ಆರ್ ಟಿ ಸಿ ಪ್ರಯಾಣಿಕರ ಸಹಾಯಕ್ಕೆ ಆಗಮಿಸಿದ್ದು, ಭೂ ಕುಸಿತದಿಂದ ಶಿರಾಡಿ ಮತ್ತು ಮಡಿಕೇರಿ ಘಾಟ್ ಸಂಚಾರ ಬಂದ್ ಆಗಿದ್ದರೂ ಮಂಗಳೂರು ಕೆಎಸ್‍ಆರ್ ಟಿ ಸಿ ವಿಭಾಗ ದಿಂದ ಮಂಗಳೂರು-ಬೆಂಗಳೂರು ಮಧ್ಯೆ ಎಸ್.ಕೆ. ಬಾರ್ಡರ್ ಮೂಲಕ ಬಸ್ ಸಂಚಾರ ಅರಂಭಿಸಿದೆ.
ಮಂಗಳೂರಿ ನಿಂದ ಕಾರ್ಕಳ, ಎಸ್.ಕೆ.ಬಾರ್ಡರ್, ಕುದುರೆಮುಖ, ಕಳಸ, ಕೊಟ್ಟಿಗೆಹಾರ, ಮೂಡಿಗೆರೆ, ಹಾಸನ ಮೂಲಕ ಬಸ್‍ಗಳು ಬೆಂಗಳೂರಿಗೆ ಸಂಚರಿಸಲಿವೆ.ಮಂಗಳೂರಿ ನಿಂದ ವೋಲ್ವೋ ಬಸ್‍ಗಳು ಪ್ರತಿ ಗಂಟೆಗೊಮ್ಮೆ ಹೊರಡುತ್ತಿವೆ. ಕೇವಲ ಹಗಲು ಹೊತ್ತಿನಲ್ಲಿ ಮಾತ್ರ ಈ ಬಸ್ ಗಳು ಮಂಗಳೂರು-ಬೆಂಗಳೂರು ಮಧ್ಯೆ ಸಂಚಾರ ನಡೆಸಲಿವೆ.
ಎಸ್.ಕೆ.ಬಾರ್ಡರ್ ಕುದುರೆಮುಖವರೆಗೆ ಮೊಬೈಲ್ ನೆಟ್‍ವರ್ಕ್ ಸಂಪರ್ಕ ಇಲ್ಲದ ಕಾರಣ ರಾತ್ರಿ ವೇಳೆ ಸಂಚಾರ ನಡೆಸುವುದು ದುಸ್ತರವಾಗಲಿರುವ ಹಾಗು ತುರ್ತು ಸಂದರ್ಭದಲ್ಲಿ ಸಂಪರ್ಕ ಸಾಧ್ಯವಾಗದ ಕಾರಣ ಕೇವಲ ಹಗಲು ಹೊತ್ತು ಬಸ್ ಓಡಿಸಲು ಕೆ ಎಸ್ ಆರ್ ಟಿ ಸಿ ಅಧಿಕಾರಿಗಳು ನಿರ್ಧರಿಸಿದ್ದಾರೆ .
ಪ್ರಯಾಣಿಕರ ದಟ್ಟಣೆ ಕಂಡುಬಂದರೆ ಬಸ್‍ಗಳ ಸಂಖ್ಯೆಯನ್ನು ಹೆಚ್ಚಿಸಲು ಕೆ ಎಸ್ ಅರ್ ಟಿ ಸಿ ತೀರ್ಮಾನಿಸಿದೆ . ಪ್ರಸಕ್ತ ಚಾರ್ಮಾಡಿ ಘಾಟ್‍ನಲ್ಲಿ ಮಂಗಳೂರು-ಬೆಂಗಳೂರು ಮಧ್ಯೆ 23 ಎಕ್ಸ್‍ಪ್ರೆಸ್ ಬಸ್‍ಗಳು ಸಂಚರಿಸುತ್ತಿವೆ .