LATEST NEWS
ಅವ್ಯವಸ್ಥೆ ಬಗ್ಗೆ ವಿಡಿಯೋ ಮಾಡಿದ ಕೆಎಸ್ ಆರ್ ಟಿಸಿ ಚಾಲಕ ಅಮಾನತು

ಅವ್ಯವಸ್ಥೆ ಬಗ್ಗೆ ವಿಡಿಯೋ ಮಾಡಿದ ಕೆಎಸ್ ಆರ್ ಟಿಸಿ ಚಾಲಕ ಅಮಾನತು
ಮಂಗಳೂರು ಜೂನ್ 24: ಧರ್ಮಸ್ಥಳ ಕೆಎಸ್ ಆರ್ ಟಿಸಿ ಡಿಪೋದಲ್ಲಿ ನಡೆಯುತ್ತಿದ್ದ ಅವ್ಯವಹಾರ ಅವ್ಯವಸ್ಥೆಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಮಾಡಿ ಹಂಚಿಕೊಂಡಿದ್ದ ಕೆಎಸ್ ಆರ್ ಟಿಸಿ ಚಾಲಕ ರಮೇಶ್ ಎಂಬವರನ್ನು ಅಮನಾತುಗೊಳಿಸಲಾಗಿದೆ.
ಧರ್ಮಸ್ಥಳದಲ್ಲಿ ಕೆಎಸ್ ಆರ್ ಟಿಸಿ ಡಿಪೋದಲ್ಲಿ ನಡೆಯುತ್ತಿರುವ ಅವ್ಯವಹಾರಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಆರೋಪದ ಮೇಲೆ ರಮೇಶ್ ನನ್ನು ಅಮಾನತುಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.

ಕೆಎಸ್ ಆರ್ ಟಿಸಿ ಡಿಪೋದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಹಿನ್ನಲೆಯಲ್ಲಿ ಇತ್ತೀಚೆಗೆ ರಾಜ್ಯ ಸಾರಿಗೆ ನಿಗಮದ ಉನ್ನತ ಅಧಿಕಾರಿಗಳು ಧರ್ಮಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬಸ್ ಚಾಲಕ ರಮೇಶ್ ವಿಡಿಯೋದಲ್ಲಿ ಧರ್ಮಸ್ಥಳದ ಡಿಪೋದ ಅವ್ಯವಸ್ಥೆ ಬಗ್ಗೆ ಇಂಚಿಂಚೂ ಬಿಡದೇ ವಿಡಿಯೋದಲ್ಲಿ ಹಂಚಿಕೊಂಡಿದ್ದರು.