LATEST NEWS
ಕರಾವಳಿಗೆ ತಟ್ಟದ ಕೆಎಸ್ಸಾರ್ಟಿಸಿ ನೌಕರರ ಪ್ರತಿಭಟನೆ ಬಿಸಿ -ಬಸ್ ಸಂಚಾರ ಆರಂಭ

ಉಡುಪಿ ಡಿಸೆಂಬರ್ 11: ಕೆಎಸ್ ಆರ್ ಟಿಸಿ ನೌಕರರನ್ನು ರಾಜ್ಯ ಸರಕಾರದ ನೌಕರರನ್ನಾಗಿ ಪರಿಗಣಿಸಲು ನಿರಾಕರಿಸಿರುವ ರಾಜ್ಯ ಸರಕಾರದ ಕ್ರಮವನ್ನು ವಿರೋಧಿಸಿ ಕೆಎಸ್ ಆರ್ ಟಿಸಿ ನೌಕರರು ಬಸ್ ಸಂಚಾರ ಬಂದ್ ಮಾಡಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಕೆಎಸ್ ಆರ್ ಟಿಸಿ ಬಸ್ ನೌಕರರ ಪ್ರತಿಭಟನೆ ಕರಾವಳಿ ಜಿಲ್ಲೆಗಳಾದ ಉಡುಪಿ ಹಾಗೂ ದಕ್ಷಿಣಕನ್ನಡ ಜಿಲ್ಲೆಗೆ ತಟ್ಟಿಲ್ಲ.
ಉಡುಪಿ ಜಿಲ್ಲೆಯಲ್ಲಿ ಬೆಳಿಗ್ಗೆಯಿಂದಲೇ ಅನ್ಯ ಜಿಲ್ಲೆಗಳಿಗೆ ಕೆಎಸ್ ಆರ್ ಟಿಸಿ ಬಸ್ ಸಂಚಾರ ಆರಂಭವಾಗಿದೆ. ಅಲ್ಲದೆ ಗಳೂರು ಡಿಪೋದಿಂದ ಬೆಳಗ್ಗೆಯಿಂದ ರಾಜ್ಯದ ವಿವಿಧ ಕಡೆಗಳಿಗೆ ಎಂದಿನಂತೆ ಬಸ್ ಗಳು ಕಾರ್ಯಾಚರಣೆ ನಡೆಸುತ್ತಿದೆ. ಸಾರಿಗೆ ನೌಕರರು ಎಂದಿನಂತೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಉಳಿದಂತೆ ಪುತ್ತೂರು, ಉಡುಪಿ, ಕುಂದಾಪುರ ಕೇಂದ್ರಗಳಲ್ಲೂ ಬಸ್ ಸಂಚಾರ ವ್ಯತ್ಯಯವಾಗಿಲ್ಲ. ಸಾರಿಗೆ ಬಸ್ ಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿದೆ.
