LATEST NEWS
ಮಂಗಳೂರಿನಿಂದ ಉತ್ತರ ಕರ್ನಾಟಕಕ್ಕೆ ಹೊರಟಿದೆ ಬಸ್

ಲಾಕ್ ಡೌನ್ ಬಳಿಕ ಉತ್ತರ ಕರ್ನಾಟಕದ ಪ್ರಮುಖ ಸ್ಥಳಗಳಿಗೆ ಸಾರಿಗೆ ಬಸ್ ಆರಂಭ
ಮಂಗಳೂರು, ಜೂನ್ 11 : ಮಂಗಳೂರು ಕೆಎಸ್ಸಾರ್ಟಿಸಿ ಬಸ್ ಡಿಪೋದಿಂದ ಲಾಕ್ ಡೌನ್ ಬಳಿಕ ಉತ್ತರ ಕರ್ನಾಟಕದ ಪ್ರಮುಖ ಸ್ಥಳಗಳಿಗೆ ಸಾರಿಗೆ ಬಸ್ ಆರಂಭಗೊಂಡಿದೆ.
ಬಳ್ಳಾರಿ, ಇಳಕಲ್, ಲಿಂಗಸ್ಗೂರು, ಬೆಳಗಾವಿ ಮುಂತಾದ ಸ್ಥಳಗಳಿಗೆ ಸಾರ್ವಜನಿಕರ ಬೇಡಿಕೆಯಂತೆ ಹೊಸ ನಾನ್ ಎಸಿ ಸ್ಲೀಪರ್ ಬಸ್ ಸೌಲಭ್ಯವನ್ನು ಕಲ್ಪಿಸಲಾಗಿದೆ.
ಮಂಗಳೂರು ವಿಭಾಗದ ಬಸ್ ನಿಲ್ದಾಣಗಳಲ್ಲಿ ಸ್ಕ್ರೀನಿಂಗ್ ಮಾಡಿ, ಪ್ರಯಾಣಿಕರ ವಿವರಗಳನ್ನು ದಾಖಲಿಸಿ, ಸಾಮಾಜಿಕ ಅಂತರದೊಂದಿಗೆ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ.
ಬಸ್ ಸೌಲಭ್ಯಗಳ ವಿವರ ಇಂತಿವೆ:- ಮಂಗಳೂರಿನಿಂದ ಸಂಜೆ 6.50 ಗಂಟೆಗೆ ಹೊರಟು ಕುಂದಾಪುರ, ತೀರ್ಥಹಳ್ಳಿ, ಶಿವಮೊಗ್ಗ, ಚನ್ನಗಿರೆ, ಹೊಳಲ್ಕೆರೆ, ಚಿತ್ರದುರ್ಗ, ಚಳ್ಳೆಕರೆ, ಬಳ್ಳಾರಿಗೆ ಬೆಳಿಗ್ಗೆ 7 ಗಂಟೆಗೆ ತಲುಪಲಿದೆ. ಪ್ರಯಾಣ ದರ ರೂ.800 ಇರಲಿದೆ.

ಬಳ್ಳಾರಿಯಿಂದ ಸಂಜೆ 5.31 ಗಂಟೆಗೆ ಹೊರಟು ಚಳ್ಳೆಕೆರೆ, ಚಿತ್ರದುರ್ಗ, ಹೊಳಲ್ಕೆರೆ, ಚೆನ್ನಗಿರೆ ಶಿವಮೊಗ್ಗ, ತೀರ್ಥಹಳ್ಳಿ, ಕುಂದಾಪುರ, ಮಂಗಳೂರಿಗೆ ಬೆಳಿಗ್ಗೆ 5 ಗಂಟೆಗೆ ತಲುಪಲಿದೆ. (ಪ್ರಯಾಣ ದರ ರೂ.800)
ಮಂಗಳೂರಿನಿಂದ ಸಂಜೆ 7 ಗಂಟೆಗೆ ಹೊರಟು ಹುಬ್ಬಳ್ಳಿ, ಬದಾಮಿ, ಹುನಗುಂದ ಲಿಂಗಸ್ಗೂರು ಬೆಳಿಗ್ಗೆ 7.30 ಗಂಟೆಗೆ ತಲುಪಲಿದೆ.(ಪ್ರಯಾಣ ದರ ರೂ. 950)
ಲಿಂಗಸ್ಗೂರಿನಿಂದ ಸಂಜೆ 4.30 ಗಂಟೆಗೆ ಹೊರಟು ಹುನಗುಂದ, ಬದಾಮಿ, ಹುಬ್ಬಳ್ಳಿ ಮಂಗಳೂರು ಬೆಳಿಗ್ಗೆ 5 ಗಂಟೆಗೆ ತಲುಪಲಿದೆ. ಪ್ರಯಾಣ ದರ ರೂ.950 ಇರಲಿದೆ.
ಮಂಗಳೂರಿನಿಂದ ಸಂಜೆ 7.30 ಗಂಟೆಗೆ ಹೊರಟು ಹುಬ್ಬಳ್ಳಿ, ಗದಗ, ಗಜೇಂದ್ರಗಡ ಇಳಕಲ್ ಬೆಳಿಗ್ಗೆ 7 ಗಂಟೆ ತಲುಪಲಿದೆ. (ಪ್ರಯಾಣ ದರ ರೂ. 950)
ಇಳಕಲ್ ನಿಂದ ಸಂಜೆ 6.30 ಗಂಟೆಗೆ ಹೊರಟು ಗಜೇಂದ್ರಗಡ, ಗದಗ, ಹುಬ್ಬಳ್ಳಿ ಮಂಗಳೂರಿಗೆ ಬೆಳಿಗ್ಗೆ 6 ಗಂಟೆಗೆ ತಲುಪಲಿದೆ. (ಪ್ರಯಾಣ ದರ ರೂ. 950)
ಮಂಗಳೂರಿನಿಂದ ಸಂಜೆ 6.30 ಗಂಟೆಗೆ ಹೊರಟು ಕುಂದಾಪುರ, ಹುಬ್ಬಳ್ಳಿ, ಧಾರವಾಡ ಬೆಳಗಾವಿಗೆ ಬೆಳಿಗ್ಗೆ 5.30 ಗಂಟೆಗೆ ತಲುಪಲಿದೆ. (ಪ್ರಯಾಣ ದರ ರೂ. 800)
ಬೆಳಗಾವಿಯಿಂದ ಸಂಜೆ 6.30 ಗಂಟೆಗೆ ಹೊರಟು ಧಾರವಾಡ ಹುಬ್ಬಳ್ಳಿ, ಕುಂದಾಪುರ, ಮಂಗಳೂರಿಗೆ ಬೆಳಿಗ್ಗೆ 5.30 ಗಂಟೆಗೆ ತಲುಪಲಿದೆ. (ಪ್ರಯಾಣ ದರ ರೂ. 800)
ಬಸ್ ಪ್ರಯಾಣಕ್ಕೆ ಆನ್‍ಲೈನ್ ಮುಂಗಡ ಟಿಕೇಟು ಬುಕ್ಕಿಂಗ್ ಸೌಲಭ್ಯವನ್ನೂ ಒದಗಿಸಲಾಗಿದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.