Connect with us

LATEST NEWS

ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ! ಬೆಚ್ಚಿದ ಕರಾಚಿ ಬ್ಲಾಕ್ ಔಟ್..!

ನವದೆಹಲಿ, ಜೂನ್ 11: ಕಳೆದ ಬಾರಿಯ ಬಾಲಾಕೋಟ್ ಸರ್ಜಿಕಲ್ ಸ್ಟ್ರೈಕ್ ಬಳಿಕ ಪಾಕಿಸ್ಥಾನಿ ಜನ ಯಾವ ತರ ಪಥರಗುಟ್ಟಿದ್ದಾರೆ ಅಂದರೆ, ರಾತ್ರಿ ಹಠಾತ್ತಾಗಿ ವಿಮಾನಗಳು ಸದ್ದು ಮಾಡಿದರೆ ಭಾರತವೇ ದಾಳಿ ಮಾಡ್ತು ಅನ್ನೋ ರೀತಿ ಭಯ ಪಡುತ್ತಿದ್ದಾರೆ. ಮೊನ್ನೆ ಅಂತಹುದೇ ಸನ್ನಿವೇಶ ಆಗಿ ಹೋಯ್ತು ಅಂದರೆ ನೀವು ನಂಬಲೇಬೇಕು..

ಅದು ಮಂಗಳವಾರ(ಜೂನ್ 9) ತಡರಾತ್ರಿ ಆಗಿತ್ತು. ಪಾಕಿಸ್ಥಾನದ ಕರಾಚಿ ನಗರದ ಮೇಲಿನಿಂದ ಹಠಾತ್ತಾಗಿ ವಾಯುಪಡೆಯ ವಿಮಾನಗಳು ಅತ್ತಿಂದಿತ್ತ ಹಾರಾಡ ತೊಡಗಿದ್ದವು. ರೊಯ್ಯನೆ ಹಾರಿ ಬರುತ್ತಿದ್ದ ಜೆಟ್ ವಿಮಾನಗಳನ್ನು ನೋಡಿದ ಜನ ಬೆಚ್ಚಿ ಬಿದ್ದಿದ್ದರು. ಜನರಷ್ಟೇ ಅಲ್ಲ, ಕರಾಚಿಯ ಜಿಲ್ಲಾಡಳಿತದ ಅಧಿಕಾರಿಗಳೂ ಬೆಚ್ಚಿ ಹೋಗಿದ್ದರು. ಭಾರತದ ಫೈಟರ್ ಜೆಟ್ ಗಳು ಇನ್ನೇನು ಕರಾಚಿ ಮೇಲೆ ಬಾಂಬ್ ದಾಳಿಯನ್ನು ಮಾಡಿಯೇ ಬಿಟ್ಟವು ಎಂಬ ಭೀತಿ, ಗಲಿಬಿಲಿ ಉಂಟಾಗಿತ್ತು. ಜಿಲ್ಲಾಡಳಿತ ಏನಾಗುತ್ತಿದೆ ಅನ್ನುವುದನ್ನು ಯೋಚಿಸುವ ಮೊದಲೇ ಇಡೀ ಕರಾಚಿ ನಗರದಲ್ಲಿ ವಿದ್ಯುತ್ ಸ್ಥಗಿತಗೊಳಿಸಿ ಬ್ಲಾಕ್ ಔಟ್ ಮಾಡಲು ಆದೇಶ ಮಾಡಿತ್ತು. ಕತ್ತಲ ರಾತ್ರಿಯಲ್ಲಿ ತೂರಿ ಬರುತ್ತಿದ್ದ ಫೈಟರ್ ಜೆಟ್ ಗಳು ಜನರನ್ನು ಮತ್ತಷ್ಟು ಆತಂಕಕ್ಕೆ ದೂಡಿದ್ದವು. ಹೌದು.. ಮಂಗಳವಾರ ಕರಾಚಿಯ ಜನ ಅಕ್ಷರಶಃ ಬೆಚ್ಚಿ ಹೋಗಿದ್ದರು. ಬಾಲಾಕೋಟ್ ದಾಳಿಯ ಕರಾಳ ನೆನಪು ಮಾಡಿಕೊಂಡು ಅವರೆಲ್ಲ ಬೆದರಿ ಹೋಗಿದ್ದರು…!

ಹೌದು.. ಕರಾಚಿ ನಗರದಲ್ಲಿ ಮಂಗಳವಾರ ರಾತ್ರಿ ಭೀತಿಯ ನೆರಳಾಡಿದ್ದು ಸತ್ಯ. ಅದಕ್ಕೆ ಕಾರಣವಾಗಿದ್ದೂ ಫೈಟರ್ ಜೆಟ್ ಗಳು ಅನ್ನುವುದೂ ಅಷ್ಟೇ ಸತ್ಯ. ವಿಷ್ಯ ಏನಪ್ಪಾ ಅಂದ್ರೆ, ಪಾಕಿಸ್ಥಾನಿ ಏರ್ ಫೋರ್ಸ್ ತನ್ನ ಫೈಟರ್ ಜೆಟ್ ಗಳನ್ನು ರಾತ್ರಿ ಹಾರಾಟದ ಪ್ರಾಕ್ಟೀಸ್ ಗೆ ಇಳಿಸಿತ್ತು. ಮೀರಜ್ ವಿಮಾನಗಳು, ಎಫ್ 16, ಜೆಎಫ್ 17 ನಂತಹ ಮಿಗ್ ಯುದ್ಧ ವಿಮಾನಗಳು “ವಾರ್ ಆಫ್ ಗೇಮ್” ಮಾದರಿಯಲ್ಲಿ ಕಾರ್ಯಾಚರಣೆ ಪ್ರಾಕ್ಟೀಸ್ ನಡೆಸಿದ್ದವು. ಆದರೆ, ಈ ಬಗ್ಗೆ ಪಾಕಿಸ್ಥಾನ ಸರಕಾರಕ್ಕೆ ಗೊತ್ತಿತ್ತೇ ವಿನಾ ಯಾವುದೇ ಜಿಲ್ಲಾಡಳಿತಗಳಿಗೆ ಮಾಹಿತಿ ನೀಡಿರಲಿಲ್ಲ.

ಇದರಿಂದಾಗಿ ಹಠಾತ್ತಾಗಿ ಕಗ್ಗತ್ತಲ ರಾತ್ರಿಯಲ್ಲಿ ಹಾರತೊಡಗಿದ್ದ ಯುದ್ಧ ವಿಮಾನಗಳನ್ನು ನೋಡಿ ಜನ ಭೀತಿಗೆ ಒಳಗಾಗಿದ್ದರು. ಕೆಲವೇ ಕ್ಷಣಗಳಲ್ಲಿ ಭಾರತದ ದಾಳಿ ಬಗ್ಗೆ ವದಂತಿ ಹರಡಿತ್ತು. ಜೆಇಎಂ ಭಯೋತ್ಪಾದಕ ಸಂಘಟನೆಯ ಬೆನ್ನತ್ತಿ ಭಾರತದ ವಾಯುಪಡೆ ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ಮಾಡಿದೆ ಎನ್ನುವ ರೀತಿ ಸೋಶಿಯಲ್ ಮೀಡಿಯಾಗಳಲ್ಲಿ ವದಂತಿ ಸ್ಫೋಟವಾಗಿತ್ತು.

 

ಕೆಲವರಂತೂ, ಟ್ವಿಟರ್ ಗಳಲ್ಲಿ ಮತ್ತೊಂದು ಬಾಲಾಕೋಟ್ ದಾಳಿ ಎಂತಲೇ ಟ್ವೀಟ್ ಮಾಡಿದ್ದರು. ಆದರೆ, ರಾತ್ರಿ ಕಳೆಯುವಷ್ಟರಲ್ಲಿ ನಿಜ ವಿಚಾರ ಗೊತ್ತಾಗಿ ಹರಿಯಬಿಟ್ಟಿದ್ದ ಮೆಸೇಜ್ ಗಳನ್ನು ಡಿಲೀಟ್ ಮಾಡತೊಡಗಿದ್ದರು ! ಕೆಲವು ಪತ್ರಕರ್ತರಂತೂ, ತಮ್ಮ ಹೇಳಿಕೆ ಬದಲಿಸಿ ಪಾಕ್ ಫೈಟರ್ ಜೆಟ್ ಗಳ ಹಾರಾಟ ಬಾಲಾಕೋಟ್ ದೃಷ್ಯಗಳನ್ನೇ ಕಣ್ಣ ಮುಂದೆ ತಂದಿದ್ದವು ಎಂದು ಬರೆದುಕೊಂಡಿದ್ದರು.

ಈ ಬಗ್ಗೆ ಪಾಕಿಸ್ಥಾನಿ ವಾಯುಪಡೆ, ಮುಜುಗರವಾಗುವುದನ್ನು ತಪ್ಪಿಸಲೆಂದೋ ಏನೋ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಪಾಕ್ ಮಾಧ್ಯಮಗಳಲ್ಲಿ ಈ ಬಗ್ಗೆ ಸುದ್ದಿಯಾದಾಗ ಭಾರತೀಯ ವಾಯುಪಡೆ ಮಾತ್ರ, ನಾವು ಯಾವುದೇ ಕಾರ್ಯಾಚರಣೆ ಮಾಡಿಲ್ಲ ಎಂದು ಪ್ರತಿಕ್ರಿಯಿಸಿದೆ.

ರಕ್ಷಣಾ ವಿಚಾರಗಳ ಕುರಿತ ಅಂಕಣಕಾರನೆಂದು ಗುರುತಿಸಲ್ಪಟ್ಟಿರುವ ಶಿವ್ ಅರೂರ್ ಈ ಬಗ್ಗೆ ವ್ಯಂಗ್ಯ ಭರಿತ ಟ್ವೀಟ್ ಮಾಡಿದ್ದಾರೆ. ಇದು 2019ರ ಬಾಲಾಕೋಟ್ ದಾಳಿ ಪರಿಣಾಮ ಬೀರಿದ್ದನ್ನು ತೋರಿಸುತ್ತದೆ. ಗುಡ್ಡದ ಮೇಲೆ ನೆಲೆ ಕಂಡಿದ್ದ ಉಗ್ರರ ಶಿಬಿರಗಳಿಗೆ ಬಾಂಬಿನ ಮಳೆಗರೆದಿದ್ದು ಒಂದು ಕಡೆಯಾದರೆ, ಪಾಕಿಸ್ತಾನ ಮಾತ್ರ ಇದರಿಂದ ಬೆಚ್ಚಿ ಹೋಗಿತ್ತು. ಈಗ ಪಾಕಿಸ್ತಾನಿ ಜೆಟ್ ಗಳನ್ನು ಐಎಎಫ್ ಜೆಟ್ ಗಳೆಂದು ನಂಬಿ ಜನ ಭಯಕ್ಕೀಡಾಗಿದ್ದಾರೆ ಎಂದು ಶಿವ್ ಅರೂರ್ ಟ್ವೀಟ್ ಮಾಡಿದ್ದಾರೆ.
ಅಂದಹಾಗೆ, ಕಳೆದ 2019ರ ಫೆಬ್ರವರಿಯಲ್ಲಿ ಪಾಕಿಸ್ತಾನದ ಬಾಲಾಕೋಟ್ ಮೇಲೆ ದಾಳಿ ನಡೆಸಿದ್ದ ಭಾರತದ ವಾಯುಪಡೆ ಅಲ್ಲಿದ್ದ ಜೆಇಎಂ ಉಗ್ರರ ಶಿಬಿರಗಳನ್ನು ನಾಶಪಡಿಸಿತ್ತು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *