KARNATAKA
ಕೆಎಸ್ಆರ್ ಟಿಸಿ ಹಾಗೂ ಸರಕಾರದ ನಡುವೆ ನಡೆದ ಸಂಧಾನ ವಿಫಲ – ನಾಳೆ ಕೆಎಸ್ಆರ್ ಟಿಸಿ ಬಸ್ ಇಲ್ಲ
ಬೆಂಗಳೂರು ಡಿಸೆಂಬರ್ 13: ಕೆಎಸ್ ಆರ್ ಟಿಸಿ ನೌಕರರು ಮತ್ತೆ ರಾಜ್ಯ ಸರಕಾರದ ನಡುವೆ ಸಂಧಾನಸಬೆ ಹೆಸರಲ್ಲಿ ದೊಂಬರಾಟ ಶುರವಾಗಿದ್ದು, ಸಂಜೆ ಕೆಎಸ್ ಆರ್ ಟಿಸಿ ಬಸ್ ಸಂಚಾರ ಆರಂಭವಾಗಲಿದೆ ಎಂಬ ಸಚಿವ ಸವದಿ ಹೇಳಿಕೆ ಬೆನ್ನಲ್ಲೆ. ಕೆಎಸ್ ಆರ್ ಟಿಸಿ ನೌಕರರ ಸಂಘದ ಮುಖಂಡರು ನಾಳೆ ಬಸ್ ರಸ್ತೆಗೆ ಇಳಿಯಲ್ಲ ಎಂದು ಘೋಷಿಸಿದ್ದಾರೆ. ಇದರೊಂದಿಗೆ ರಾಜ್ಯ ಸರಕಾರ ಹಾಗೂ ಕೆಎಸ್ ಆರ್ ಟಿಸಿ ನೌಕರರ ಸಂಘದ ಸಂಧಾನ ಮುರಿದು ಬಿದ್ದಿದೆ.
ಪ್ರತಿಭಟನೆ ನಡೆಸುತ್ತಿದ್ದ ಸಾರಿಗೆ ಸಿಬ್ಬಂದಿ ಜತೆಗಿನ ಮಾತುಕತೆ ಯಶಸ್ವಿಯಾಗಿದ್ದು, ಇಂದು ರಾತ್ರಿಯಿಂದಲೇ ಬಸ್ ಸಂಚಾರ ಪುನರಾರಂಭ ಆಗಲಿದೆ ಎಂದು ಸಚಿವ ಲಕ್ಷ್ಮಣ ಸವದಿ ಅವರು ಸಂಜೆ 6.30ರ ಸುಮಾರಿಗೆ ಹೇಳಿದ್ದರು. ಅಲ್ಲದೆ ಕೋಡಿಹಳ್ಳಿ ಚಂದ್ರಶೇಖರ್ ಕೂಡ, ಸಂಧಾನ ಸಭೆ ಸಕ್ಸಸ್ ಆಗಿದ್ದು, ಮುಷ್ಕರ ಕೈ ಬಿಡುವ ಬಗ್ಗೆ ಫ್ರೀಡಂ ಪಾರ್ಕ್ನಲ್ಲಿ ಘೋಷಣೆ ಮಾಡುವುದಾಗಿ ಹೇಳಿದ್ದರು. ಇದರ ಬೆನ್ನಲ್ಲೇ ಕೆಲವೆಡೆ ಬಸ್ಗಳ ಸಂಚಾರವೂ ಆರಂಭವಾಗಿತ್ತು. ಇದೀಗ ಮುಷ್ಕರ ಮುಂದುವರಿಸಿದ ಪರಿಣಾಮ ಸಂಚಾರ ಆರಂಭಿಸಿದ್ದ ಬಸ್ಗಳನ್ನು ನಿಲ್ಲಿಸಲಾಗಿದ್ದು, ಪ್ರಯಾಣಿಕರ ಪ್ರರದಾಟ ಮುಂದುವರಿದಿದೆ.
ಸಂಧಾನ ಸಭೆಯಲ್ಲಿ ಸಾರಿಗೆ ಸಿಬ್ಬಂದಿಯನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಲ್ಲ ಎಂದಿದ್ದ ಸರ್ಕಾರ, 6ನೇ ವೇತನ ಆಯೋಗ ಜಾರಿ ಸೇರಿದಂತೆ, ಉಳಿದ ಬೇಡಿಕೆ ಈಡೇರಿಸಲು ಒಪ್ಪಿತ್ತು. ಇದಕ್ಕೆ ಮೂವರ ಸಚಿವರ ಮುಂದೆ ನಮಗೆ ಒಪ್ಪಿಗೆ ಇದೆ ಎಂದು ಚಪ್ಪಾಳೆ ತಟ್ಟಿ ಸಭೆಯಿಂದ ಚಂದ್ರಶೇಖರ್ ಆ್ಯಂಡ್ ಟೀಮ್ ಹೊರಬಂದಿತ್ತು. ಆದರೆ, ಅಲ್ಲಿಂತ ಪ್ರತಿಭಟನೆ ಸ್ಥಳಕ್ಕೆ ಹೋದ ತಕ್ಷಣ ಯೂಟರ್ನ್ ಹೊಡೆದಿದೆ. ಸರ್ಕಾರಿ ನೌಕರರನ್ನಾಗಿ ಪರಿಗಣಿಸುವಂತೆ ಸಾರಿಗೆ ನೌಕರರ ಒಕ್ಕೂಟದ ಅಧ್ಯಕ್ಷರು ಆಗ್ರಹಿಸಿದ್ದಾರೆ. ನಾಳೆಯೂ ಬಸ್ ಸಂಚಾರ ಇರಲ್ಲ ಎಂಬ ಮಾಹಿತಿ ಲಭ್ಯವಾಗಿದೆ