LATEST NEWS
ನಾಳೆ ಖಾಸಗಿ ಬಸ್ ಬಂದ್ ಇಲ್ಲ
ಉಡುಪಿ ಡಿಸೆಂಬರ್ 13: ಕೆಎಸ್ ಆರ್ ಟಿಸಿ ನೌಕರರ ಹೋರಾಟಕ್ಕೆ ಬೆಂಬಲವಾಗಿ ರಾಜ್ಯದಲ್ಲಿ ಖಾಸಗಿ ಬಸ್ ಸಂಚಾರ ಬಂದ್ ಮಾಡಲಾಗುವುದು ಎಂದು ಬೆಂಗಳೂರಿನ ಖಾಸಗಿ ಬಸ್ ಮಾಲಕರ ಸಂಘದ ಹೇಳಿಕೆಗೆ ಉಡುಪಿಯಲ್ಲಿ ರಾಜ್ಯ ಖಾಸಗಿ ಬಸ್ ಮಾಲೀಕರ ಒಕ್ಕೂಟದ ಖಜಾಂಚಿ ಕುಯಿಲಾಡಿ ಸುರೇಶ್ ಪ್ರತಿಕ್ರಿಯೆ ನೀಡಿದ್ದು, ರಾಜ್ಯದಲ್ಲಿ ಸೋಮವಾರ ಖಾಸಗಿ ಬಸ್‌ಗಳ ಬಂದ್ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ನಟರಾಜ್ ಶರ್ಮಾ ಹೇಳಿಕೆಗೂ ನಮಗೂ ಯಾವುದೇ ಸಂಬಂಧ ಇಲ್ಲ. ಕಳೆದ ಮೂರು ದಿನಗಳಿಂದ 4 ಸಾರಿಗೆ ನಿಗಮಗಳ ನೌಕರರು ಪ್ರತಿಭಟನೆ ನಡೆಸುತ್ತಿದ್ದಾರೆ. ಸರ್ಕಾರ ಹಂತ ಹಂತವಾಗಿ ಬೇಡಿಕೆ ಈಡೇರಿಸುವ ವಿಶ್ವಾಸವಿದೆ. ಸರ್ಕಾರಕ್ಕೆ ಬೆಂಬಲವಾಗಿ ಖಾಸಗಿ ಬಸ್‌ಗಳು ನಿಂತಿದ್ದು, 8,500ಕ್ಕೂ ಹೆಚ್ಚು ಬಸ್‌ಗಳು ಓಡಾಡಲಿವೆ. ಬಂದ್ ಮಾಡುವುದಾಗಿ ಹೇಳಿರುವ ನಟರಾಜ್ ಶರ್ಮಾ ಹೇಳಿಕೆಗೂ ನಮಗೂ ಸಂಬಂಧವಿಲ್ಲ. ಪ್ರಯಾಣಿಕರು ಗೊಂದಲಕ್ಕೀಡಾಗುವ ಅಗತ್ಯವಿಲ್ಲ ಎಂದು ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.
Facebook Comments
You may like
-
ಕುಂಜಿಬೆಟ್ಟು ಚಾಮುಂಡಿಶ್ವೇರಿ ಗುಡಿಯ ಗರ್ಭಗುಡಿಯೊಳಗೆ ನಾಗರಹಾವಿನ ರಕ್ಷಣೆ
-
ಸಚಿವ ಕೋಟ ಶ್ರೀನಿವಾಸ ಪೂಜಾರಿ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ನಿಂದನಾತ್ಮಕ ಪೋಸ್ಟ್
-
ಒಂದೆರಡು ದಿನಗಳಲ್ಲಿ ಎಲ್ಲಾ ಭಿನ್ನಮತ ಶಮನ – ಬಿವೈ ರಾಘವೇಂದ್ರ
-
ಡ್ರೋಣ್ ಮೂಲಕ ಮದುಮಗನ ಕೈಗೆ ಬಂತು ಮಾಂಗಲ್ಯ ಸರ…!!
-
ಬಾರ್ಕೂರಿನಲ್ಲಿ ಶ್ರೀ ಕುಮಾರಸ್ವಾಮಿ ಮೂರ್ತಿಯ ಮೇಲೆ ಹರಿದಾಡಿದ ಸರ್ಪ
-
ಕೂಲಿ ಕಾರ್ಮಿಕನ ಮೇಲೆ ಮಾರಣಾಂತಿಕವಾಗಿ ದಾಳಿ ನಡೆಸಿದ ಕರಡಿ
You must be logged in to post a comment Login