Connect with us

    BANTWAL

    ಸ್ಕೂಟರ್ ಗೆ ಡಿಕ್ಕಿ ಹೊಡೆದ ಕೆಎಸ್ಆರ್ ಟಿಸಿ ಬಸ್ – ವಿಧ್ಯಾರ್ಥಿನಿಗೆ ಗಂಭೀರ ಗಾಯ

    ಬಂಟ್ವಾಳ ಜನವರಿ 10: ಎರಡು ಕೆಎಸ್ಆರ್ ಟಿಸಿ ಬಸ್ ಗಳ ಓವರ್ ಟೇಕ್ ಅಬ್ಬರಕ್ಕೆ ಸ್ಕೂಟರ್ ನಲ್ಲಿ ಕಾಲೇಜಿನ ತೆರಳುತ್ತಿದ್ದ ವಿಧ್ಯಾರ್ಥಿನಿಯೊಬ್ಬಳಿಗೆ ಕೆಎಸ್ಆರ್ ಟಿಸಿ ಬಸ್ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡ ಘಟನೆ ವಗ್ಗ ದಲ್ಲಿ ನಡೆದಿದೆ.

    ಗಾಯಗೊಂಡ ವಿಧ್ಯಾರ್ಥಿನಿಯನ್ನು ಅಲ್ಲಿಪಾದೆ ಪೆರಿಯಾರ್ ದೋಟದ ಪಲ್ಲವಿ ಎಂದು ಗುರುತಿಸಲಾಗಿದೆ. ಕೆಳಗಿನ ವಗ್ಗ ತಿರುವಿನಲ್ಲಿ ಧರ್ಮಸ್ಥಳ ಕಡೆಯಿಂದ ಮಂಗಳೂರು ಕಡೆಗೆ ತೆರಳುವ ಎರಡು ಬಸ್ ಗಳು ಅತೀ ವೇಗ ಮತ್ತು ಅಜಾಗರೂಕತೆಯಿಂದ ಓವರ್ ಟೇಕ್ ಮಾಡಿದೆ. ಈ ಸಂದರ್ಭದಲ್ಲಿ ಬಂಟ್ವಾಳ ಕಡೆಯಿಂದ ವಾಮದಪದವು ಕಾಲೇಜಿಗೆ ದ್ವಿಚಕ್ರದಲ್ಲಿ ತೆರಳುತ್ತಿದ್ದ ವಿದ್ಯಾರ್ಥಿನಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

    ಬಸ್ ಗಳೆರಡರ ಅಜಾಗರೂಕತೆಯಿಂದ ಸಂಚಾರಕ್ಕೆ ವಿದ್ಯಾರ್ಥಿನಿ ಗಂಭೀರವಾಗಿ ಗಾಯಗೊಂಡಿದ್ದು ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಘಟನಾ ಸ್ಥಳಕ್ಕೆ ಬಂಟ್ವಾಳ ಟ್ರಾಫಿಕ್ ಪೋಲೀಸರು ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *