LATEST NEWS
ಇವಿ ಆಟೋರಿಕ್ಷಾ ಸಮಸ್ಯೆಗಳ ಆಗರ,ಮಹೀಂದ್ರ ವಿರುದ್ದ ತಿರುಗಿ ಬಿದ್ದ ಮಂಗಳೂರು ಆಟೋಚಾಲಕರು..!

ಮಂಗಳೂರು : ಮಹೀಂದ್ರಾ ಕಂಪೆನಿ ಹೊರ ತಂದಿರುವ ಬ್ಯಾಟರಿ ಚಾಲಿತ ಆಟೋ ರಿಕ್ಷಾ ಮಹೀಂದ್ರಾ ಟ್ರಯೋ ಸಮಸ್ಯೆಗಳ ಆಗರವಾಗಿದ್ದು ಮಂಗಳೂರಿನಲ್ಲಿ ಕಂಪೆನಿ ವಿರುದ್ದ ಆಟೋ ಚಾಲಕರು ಒಟ್ಟಾಗಿ ಪ್ರತಿಭಟನೆ ನಡೆಸಿದ್ದಾರೆ.
ಮಂಗಳೂರು ನಗರದ ಮಿನಿ ವಿಧಾನಸೌಧದ ಎದುರು ಇವಿ ಆಟೋರಿಕ್ಷಾ ಚಾಲಕರು ಪ್ರತಿಭಟನೆ ನಡೆಸಿ ಮಹೀಂದ್ರಾ ಟ್ರಯೋದಿಂದ ಆಟೋರಿಕ್ಷಾ ಚಾಲಕರಿಗೆ ಭಾರೀ ತೊಂದರೆಯಾಗುತ್ತಿದ್ದು ಕಂಪೆನಿಯವರು ಕೂಡಲೇ ಉತ್ತಮ ಸರ್ವಿಸ್ ಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಟ್ರಿಯೋ ರಿಕ್ಷಾ ಕಮಿಟಿಯ ಅಧ್ಯಕ್ಷ ಅನಿಲ್ ಸಲ್ದಾನ್ಹ ವಾಹನದಲ್ಲಿ ಸಮಸ್ಯೆ ಉಂಟಾದ್ರೆ ಸರಿಯಾದ ಸಮಯಕ್ಕೆ ದುರಸ್ತಿ ಮಾಡಿಕೊಡುತ್ತಿಲ್ಲ. ಬಿಡಿಭಾಗಗಳು ಸಿಗುತ್ತಿಲ್ಲ. ವಾರಂಟಿ ಷರತ್ತುಗಳನ್ನು ಸರಿಯಾಗಿ ಪಾಲಿಸುತ್ತಿಲ್ಲ.
ಸರಕಾರದ ಸಬ್ಸಿಡಿಯನ್ನು ನೀಡುತ್ತಿಲ್ಲ ಎಂದು ದೂರಿ ಆಕ್ರೋಶ ವ್ಯಕ್ತಪಡಿಸಿದರು. ಸಮಿತಿಯ ಗೌರವಾಧ್ಯಕ್ಷ ಬಾಲಕೃಷ್ಣ ಶೆಟ್ಡಿ, ಉಪಾಧ್ಯಕ್ಷ ರೋಹಿತ್ ಕೋಟ್ಯಾನ್, ಶರತ್ ಪದವಿನಂಗಡಿ, ರಾಮನಾಥ ಪ್ರಭು ಮೊದಲಾದವರು ಪಾಲ್ಗೊಂಡಿದ್ದರು.