DAKSHINA KANNADA
ಪುತ್ತೂರು – ಕೆಎಸ್ಆರ್ ಟಿಸಿ ಮತ್ತು ಬೈಕ್ ಅಪಘಾತ – ಬೈಕ್ ಸವಾರ ಸಾವು
ಪುತ್ತೂರು ಡಿಸೆಂಬರ್ 19: ಬೈಕ್ ಮತ್ತು ಕೆಎಸ್ ಆರ್ ಟಿಸಿ ಬಸ್ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಸಾವನಪ್ಪಿದ ಘಟನೆ ಪುತ್ತೂರಿನ ಮುರ ಎಂಬಲ್ಲಿ ನಡೆದಿದೆ.
ಮೃತ ವ್ಯಕ್ತಿ ಪಡ್ನೂರು ಗ್ರಾಮದ ಅಬ್ದುಲ್ ಕುಂಞಂ(65) ಎಂದು ತಿಳಿದು ಬಂದಿದೆ. ಅಪಘಾತದ ತೀವ್ರತೆಗೆ ಬೈಕ್ ನಜ್ಜು ಗುಜ್ಜಾಗಿದೆ. ಬೈಕ್ ಸವಾರನನ್ನು ಆಸ್ಪತ್ರೆಗೆ ರವಾನಿಸಲಾಯಿತಾದರೂ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.