LATEST NEWS
ಜನತಾ ಲಾಕ್ ಡೌನ್ ನಿಂದ ಕೋವಿಡ್ ನಿಯಂತ್ರಣ ಕಷ್ಟ: ಶೋಭಾ ಕೆರಂದ್ಲಾಜೆ

ಉಡುಪಿ, ಮೇ 06 : ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದಾಗಿ, ಜಿಲ್ಲೆಯಲ್ಲೂ ಕೂಡ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಜನತಾ ಲಾಕ್ ಡೌನ್ ನಿಂದ ಕೋವಿಡ್ ಪ್ರಕರಣಗಳ ನಿಯಂತ್ರಣ ಕಷ್ಟ ಅನಿಸುತ್ತಿದೆ, ಕಳೆದ ಬಾರಿಯಂತೆ ಗಂಭೀರವಾಗಿ ಕರ್ಪ್ಯೂ ಮಾಡಬೇಕು ಹಾಗು ಅವಶ್ಯಕ ವಸ್ತುಗಳಿಗೆ ಮಾತ್ರ ಅವಕಾಶ ನೀಡಬೇಕು. ಉಳಿದಂತೆ ಪೂರ್ಣ ಲಾಕ್ಡೌನ್ ಮಾಡಬೇಕೆಂದು ಸಂಸದೆ ಶೋಭಾ ಕೆರಂದ್ಲಾಜೆ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.
ಜನ ಈಗಿನಂತೆ ಎಲ್ಲೆಂದರಲ್ಲಿ ಓಡಾಡಿದರೆ ಕೋವಿಡ್ ನಿಯಂತ್ರಣ ಸಾಧ್ಯವಿಲ್, ಮದುವೆ, ದೇವಸ್ಥಾನ ಕಾರ್ಯಕ್ರಮ, ಭೂತಾರಾಧನೆ ಎಲ್ಲವೂ ನಡೆಯುತ್ತಿದೆ. ಜನ ಕಾರ್ಯಕ್ರಮಗಳಲ್ಲಿ ಹೆಚ್ಚು ಬೆರೆಯುವುದರಿಂದ ರೋಗ ಹರಡುತ್ತಿದೆ.

ಮುಂಬೈ ಬೆಂಗಳೂರಿನಿಂದಲೂ ಜನ ಜಿಲ್ಲೆಗೆ ಬರುತ್ತಿದ್ದಾರೆ. ಹೊರ ಜಿಲ್ಲೆಗಳಿಂದ ಬಂದವರಿಗೆ ಆದ್ಯತೆ ಮೇಲೆ ಟೆಸ್ಟ್ ಮಾಡಿಸಬೇಕು, ಇವತ್ತಿಂದ ರಾಪಿಡ್ ಟೆಸ್ಟ್ ಆರಂಭಿಸಲು ಸೂಚನೆ ನೀಡಿದ್ದೇನೆ
ಅಲ್ಲದೆ, ಹೋಂ ಕ್ಚಾರಂಟೈನ್ ಕಡ್ಡಾಯ ಮಾಡಬೇಕು, 15 ದಿನಗಳ ಕಟ್ಟುನಿಟ್ಟಿನ ಕ್ರಮ ಅನಿವಾರ್ಯ, ಜನರು ಮನೆಯಿಂದ ಹೊರಬಂದರೆ ಚೈನ್ ಲಿಂಕ್ ಕಟ್ ಮಾಡಲು ಅಸಾಧ್ಯವೆಂದು ಮಾಹಿತಿ ನೀಡಿದ್ದಾರೆ.