LATEST NEWS
ಕೋಟೆಕಾರ್ ಬ್ಯಾಂಕ್ ನಿಂದ 15 ಕೋಟಿ ಮೌಲ್ಯದ ಚಿನ್ನಾಭರಣ ದರೋಡೆ ಆಗಿದೆ – ಬ್ಯಾಂಕ್ ಅಧ್ಯಕ್ಷ ಕೃಷ್ಣ ಶೆಟ್ಟಿ ಸ್ಪಷ್ಟನೆ
ಮಂಗಳೂರು ಜನವರಿ 21: ಕೋಟೆಕಾರು ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣದಲ್ಲಿ ಒಟ್ಟು ದರೋಡೆಕೋರರನ್ನು 15 ಕೋಟಿಯ ಬೆಲೆಬಾಳುವ ಚಿನ್ನವನ್ನು ದರೋಡೆ ಮಾಡಿದ್ದಾರೆ ಎಂದು ಬ್ಯಾಂಕಿನ ಅಧ್ಯಕ್ಷ ಕೃಷ್ಣ ಶೆಟ್ಟಿ ಮಾಹಿತಿ ನೀಡಿದ್ದಾರೆ. ಚಿನ್ನದ ಜೊತೆ 11 ಲಕ್ಷ 70 ಸಾವಿರ ನಗದು ಕೂಡ ಕಳವು ಮಾಡಿದ್ದಾರೆ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದೇವೆ ಎಂದು ತಿಳಿಸಿದ್ದಾರೆ.
ದರೋಡೆಕೊರನ ಕಾಲಿಗೆ ಗುಂಡು ಹಾರಿಸಿದ ಸ್ಥಳಕ್ಕೆ ಆಗಮಿಸಿದ್ದ ಬ್ಯಾಂಕಿನ ಅಧ್ಯಕ್ಷ ಕೃಷ್ಣ ಶೆಟ್ಟಿ ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದರು. ಒಟ್ಟು ಕಳವಾದ ಚಿನ್ನಾಭರಣದ ಮೌಲ್ಯ ಒಟ್ಟು 15 ಕೋಟಿಗೂ ಎಂದರು. ಎಂಟು ಕೋಟಿಯ ಚಿನ್ನ ಲಾಕರಿನಲ್ಲಿ ಉಳಿದಿದೆ. ಈ ಬಗ್ಗೆ ಪೊಲೀಸರಿಗೂ ಮಾಹಿತಿ ನೀಡಿದ್ದೇವೆ ಎಂದಿದ್ದಾರೆ. ಮತ್ತೆ ಎಫ್ಐಆರ್ ನಲ್ಲಿ ಕಡಿಮೆ ಯಾಕೆ ತೋರಿಸಿದ್ದು ಎಂದು ಕೇಳಿದ್ದಕ್ಕೆ, ಅದು ಅಂದಾಜು ಹಾಕಿರೋದು, ನಾವು ಆಮೇಲೆ ಹೆಚ್ಚುವರಿ ಇರುವುದನ್ನು ಹೇಳಿದ್ದೇವೆ ಎಂದಿದ್ದಾರೆ.
ಇನ್ಶೂರೆನ್ಸ್ ಎಷ್ಟು ಸಿಗಬಹುದು ಎಂದು ಕೇಳಿದ್ದಕ್ಕೆ, ಇನ್ಶೂರೆನ್ಸ್ 19 ಕೋಟಿ ಇದೆ, ಮಹಜರು ಎಲ್ಲ ಆದಬಳಿಕ ಇನ್ಶೂರೆನ್ಸ್ ಪ್ರಕ್ರಿಯೆ ಆಗುತ್ತದೆ. ಒಂದು ವರ್ಷ ಬೇಕಾಗಬಹುದು. ಎಷ್ಟು ಸಿಗುತ್ತೆ ಎಂದು ನೋಡಬೇಕು ಎಂದು ಹೇಳಿದ್ದಾರೆ. ದರೋಡೆ ಪ್ರಕರಣ ದಾಖಲಾದಾಗ 4 ಕೋಟಿ ಚಿನ್ನವೆಂದು ಹೇಳಲಾಗಿತ್ತು, ಇದೀಗ 15 ಕೋಟಿ ಎಂದು ಬ್ಯಾಂಕ್ ನ ಅಧ್ಯಕ್ಷರು ಮಾಹಿತಿ ನೀಡಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ನಡೆದ ಅತೀದೊಡ್ಡ ದರೋಡೆ ಪ್ರಕರಣ ಇದಾಗಿದೆ.