LATEST NEWS
ಕೋಟ – ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾದ ವಿಧ್ಯಾರ್ಥಿನಿ….!!

ಕೋಟ ಅಗಸ್ಟ್ 01: ಎಸ್ಎಸ್ ಎಲ್ ಸಿ ವಿಧ್ಯಾರ್ಥಿನಿಯೊಬ್ಬಳು ಮನೆಯಲ್ಲಿ ಯಾರೂ ಇಲ್ಲದ ವೇಳೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೋಟದ ಕೊರವಡಿಯಲ್ಲಿ ನಡೆದಿದೆ. ಮೃತ ವಿದ್ಯಾರ್ಥಿನಿಯನ್ನು ಕೋಟ ಪಡುಕರೆ ಫ್ರೌಢಶಾಲೆಯ 10ನೇ ತರಗತಿಯ ವಿದ್ಯಾರ್ಥಿ ಅನನ್ಯ (15) ಎಂದು ಗುರುತಿಸಲಾಗಿದೆ.
ಎಂದಿನಂತೆ ಶಾಲೆಗೆ ಹೊರಟ ವಿಧ್ಯಾರ್ಥಿನಿ ಮನೆಯ ಕೋಣೆಗೆ ತೆರಳಿ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡಿದ್ದಾಳೆ. ಈ ವೇಳೆ ಪಕ್ಕದ ಮನೆಯವರು ಬೆಂಕಿಯನ್ನು ನೋಡಿ ಓಡೋಡಿ ಬಂದು ಬೆಂಕಿ ನಂದಿಸಲು ಯತ್ನಿಸಿದ್ದಾರೆ. ಬಳಿಕ ಮಣಿಪಾಲದ ಖಾಸಗಿ ಆಸ್ಪತ್ರೆ ಕೊಂಡೊಯ್ದಿದ್ದರೂ ಪ್ರಯೋಜನವಾಗದೆ ಅಸುನೀಗಿದ್ದಾಳೆ.

ಬಾಲಕಿ ಮನೆಯಲ್ಲಿ ಅಜ್ಜಿ ಮತ್ತು ಆಕೆಯ ಚಿಕ್ಕಮ್ಮನ ಜೊತೆ ವಾಸ್ತವ್ಯವಾಗಿದ್ದು ಆಕೆಯ ತಂದೆ – ತಾಯಿ ಬೆಂಗಳೂರಿನಲ್ಲಿ ನೆಲೆಸಿದ್ದರು. ಕುಂದಾಪುರ ಆರಕ್ಷಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.