Connect with us

LATEST NEWS

ರಾಜಕಾರಣದಲ್ಲಿ ಗುಡುಗು ಸಿಡಿಲು ಮಿಂಚು ಸಹಜ – ಕೋಟ ಶ್ರೀನಿವಾಸ ಪೂಜಾರಿ

ಉಡುಪಿ ಜೂನ್ 7: ಮುಖ್ಯಮಂತ್ರಿ ಯಡಿಯೂರಪ್ಪ ಅವರ ರಾಜಿನಾಮೆ ವಿಚಾರವಾಗಿ ಪ್ರತಿಕ್ರಿಯಿಸಿದ ಹಿಂದುಳಿದ ವರ್ಗಗಳ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ರಾಜಕಾರಣದಲ್ಲಿ ಗುಡುಗು ಸಿಡಿಲು ಮಿಂಚು ಬರುವುದು ಸಹಜ, ನಂತರ ತಣ್ಣನೆಯ ಮಳೆ ಬಂದು ವಾತಾವರಣ ತಿಳಿಯಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.


ಸದ್ಯ ಬಿಜೆಪಿ ರಾಷ್ಟ್ರಾಧ್ಯಕ್ಷರು, ರಾಜ್ಯಾಧ್ಯಕ್ಷರು, ಮುಖ್ಯಮಂತ್ರಿ ಮತ್ತು ಸರಕಾರಕ್ಕೆ ಯಾವ ಗೊಂದಲವೂ ಇಲ್ಲ. ನಿನ್ನೆ ದೇವರಾಜ ಅರಸು ಪುಣ್ಯ ತಿಥಿ ಕಾರ್ಯಕ್ರಮದಲ್ಲಿ ಸಿಎಂ ಸ್ಪಷ್ಟವಾಗಿ ಮಾತನಾಡಿದ್ದಾರೆ. ನಮ್ಮಲ್ಲಿ ಯಾವುದೇ ಗೊಂದಲವಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಅಲ್ಲದೆ ಹೈಕಮಾಂಡ್ ಕೊಟ್ಟ ಸಾಮರ್ಥ್ಯದಿಂದ ನಾನು ಖ್ಯಮಂತ್ರಿಯಾಗಿ ಒಳ್ಳೆಯ ಕೆಲಸ ಮಾಡುತ್ತಿದ್ದೇನೆ ಎಂದಿದ್ದಾರೆ. ನಾವೆಲ್ಲರೂ ಒಟ್ಟಾಗಿ ಒಂದಾಗಿ ಯಡಿಯೂರಪ್ಪನವರ ಜೊತೆ ನಿಂತಿದ್ದೇವೆ. ಸದ್ಯ ಎಲ್ಲ ಶಾಸಕರು, ಸಂಸದರು ಮತ್ತು ಮುಖ್ಯಮಂತ್ರಿಗಳ ಗುರಿ ಒಂದೇ ಕರ್ನಾಟಕವನ್ನು ಕೊರೋನಾ ಮುಕ್ತ ಮಾಡುವುದು ಎಂದರು, ಇನ್ನು ಯತ್ನಾಳ್-ಯೋಗೇಶ್ವರ ಅಪರಸ್ವರ ವಿಚಾರ ರಾಜಕಾರಣದಲ್ಲಿ ಗುಡುಗು ಸಿಡಿಲು ಮಿಂಚು ಬರುವುದು ಸಹಜ, ನಂತರ ತಣ್ಣನೆಯ ಮಳೆ ಬಂದು ವಾತಾವರಣ ತಿಳಿಯಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಪಕ್ಷದಲ್ಲಿ ಸಣ್ಣಪುಟ್ಟ ಅಪಸ್ವರಗಳು ಬಂದರೆ ರಾಜ್ಯಾಧ್ಯಕ್ಷರು ಕರೆದು ತಿಳಿ ಹೇಳುತ್ತಾರೆ. ಯಡಿಯೂರಪ್ಪನವರೇ ಮುಂದುವರಿಯುತ್ತಾರೆ ಎಂದು ನಳಿನ್ ಕುಮಾರ್ ಗಟ್ಟಿ ಧ್ವನಿಯಲ್ಲಿ ಹೇಳಿದ್ದಾರೆ ಎಂದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *