UDUPI
ಸಿಎಂಗೆ ಕೊರೊನಾ ; ಹೋಂ ಕ್ವಾರಂಟೈನ್ ಆದ ಕೋಟ ಶ್ರೀನಿವಾಸ ಪೂಜಾರಿ

ಉಡುಪಿ ಅಗಸ್ಟ್ 3: ಸಿಎಂ ಯಡಿಯೂರಪ್ಪ ಅವರಿಗೆ ಕೊರೊನಾ ಸೊಂಕು ಬಂದಿರುವ ಹಿನ್ನೆಲೆ ಅವರ ಸಂಪರ್ಕಕ್ಕೆ ಬಂದಿದ್ದ ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಹೋಂ ಕ್ವಾರಂಟೈನ್ ಗೆ ಒಳಗಾಗಿದ್ದಾರೆ.
ಜುಲೈ 30 ರಂದು ಸಭೆ ಸಂದರ್ಭ ಸಿಎಂ ಯಡಿಯೂರಪ್ಪ ಅವರ ಸಂಪರ್ಕಕ್ಕೆ ಕೋಟ ಶ್ರಿನಿವಾಸ ಪೂಜಾರಿಯವರು ಬಂದಿದ್ದರು. ಈ ಹಿನ್ನಲೆ ಬ್ರಹ್ಮಾವರ ತಾಲೂಕಿನ ಕೋಟ ಗ್ರಾಮದ ಮನೆಯಲ್ಲಿ ಕೋಟ ಶ್ರೀನಿವಾಸ ಪೂಜಾರಿ ಅವರು ಹೋಮ ಕ್ವಾರಂಟೈನ್ ಆಗಿದ್ದಾರೆ. ಸಚಿವರು ನಾಳೆ ಕೋವಿಡ್19 ಟೆಸ್ಟ್ ಮಾಡಿಸಲಿದ್ದಾರೆ. ಐದು ದಿನಗಳಿಂದ ಯಾವುದೇ ರೋಗ ಲಕ್ಷಣಗಳು ಇಲ್ಲದಿದ್ದರೂ, ಮುಂಜಾಗೃತಾ ಕ್ರಮವಾಗಿ ಕ್ವಾರಂಟೈನ್ ಆಗಿದ್ದೇನೆ ಎಂದು ಪೂಜಾರಿಯವರು ಮಾಹಿತಿ ನೀಡಿದ್ದಾರೆ. ನಾಳೆ ಕೊರೊನಾ ಟೆಸ್ಟ್ ಮಾಡಲಿದ್ದು, ವರದಿ ನೆಗೆಟಿವ್ ಬಂದರೆ ಕೆಲಸ ಕಾರ್ಯ ಮುಂದುವರೆಸುತ್ತೇನೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾಹಿತಿ ನೀಡಿದ್ದಾರೆ.
