Connect with us

LATEST NEWS

ಕೊಂಚಾಡಿ ಕಾಶೀ ಮಠದಲ್ಲಿ ಚಂಡಿಕಾ ಹವನ

ಮಂಗಳೂರು : ನಗರದ ಕೊಂಚಾಡಿ ಕ್ಷೇತ್ರದಲ್ಲಿರುವ ಶ್ರೀ ಕಾಶಿ ಮಠ ಸಂಸ್ಥಾನದ ಶಾಖಾ ಮಠದಲ್ಲಿ ಶ್ರೀ ಸಂಸ್ಥಾನದ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ಮೊಕ್ಕಾಂ ನಲ್ಲಿದ್ದು ಈ ಪ್ರಯುಕ್ತ ಶ್ರೀ ದೇವಳದಲ್ಲಿ ” ಚಂಡಿಕಾ ಹವನ ” ಶ್ರೀಗಳವರ ದಿವ್ಯ ಉಪಸ್ಥಿತಿಯಲ್ಲಿ ಜರಗಿತು.

ಪ್ರಾತಃ ಕಾಲ ಸಂಸ್ಥಾನದ ದೇವರ ನೈರ್ಮಾಲ್ಯ ಪೂಜೆ ನಡೆದ ಬಳಿಕ ಶ್ರೀ ವೆಂಕಟರಮಣ ಹಾಗೂ ಶ್ರೀ ಮಹಾಲಸಾ ನಾರಾಯಣಿ ದೇವರಿಗೆ ಶ್ರೀಗಳವರ ಅಮೃತ ಹಸ್ತಗಳಿಂದ ನೆರವೇರಿತು . ಈ ಸಂದರ್ಭದಲ್ಲಿ ವೇದ ಮೂರ್ತಿ ಎಚ್ . ಯೋಗೀಶ್ ಭಟ್ , ಸತೀಶ್ ಪೈ , ಶಾಖಾ ಮಠದ ವ್ಯವಸ್ಥಾಪಕ ಸಮಿತಿಯ ಡಿ . ವಾಸುದೇವ ಕಾಮತ್ , ಜಿ . ರತ್ನಾಕರ್ ಕಾಮತ್ , ಶಶಿಧರ್ ಪೈ ಮಾರೂರ್ , ಸೂರಜ್ ಕಾಮತ್, ದೀಪಕ್ ಕುಡ್ವ , ಪ್ರಶಾಂತ್ ಪೈ , ಅನಿಲ್ ಕಾಮತ್ ಹಾಗೂ ನೂರಾರು ಭಜಕರು ಉಪಸ್ಥಿತರಿದ್ದರು .


ಚಿತ್ರ : ಮಂಜು ನೀರೇಶ್ವಾಲ್ಯ

Share Information
Continue Reading
Advertisement
Click to comment

Leave a Reply

Your email address will not be published. Required fields are marked *