LATEST NEWS
ನಿಫಾ ವೈರಸ್ ಹಿನ್ನಲೆ ಕೊಲ್ಲೂರು ದೇವಸ್ಥಾನದಲ್ಲಿ ಕೇರಳದ ಭಕ್ತರ ಮೇಲೆ ನಿಗಾ

ನಿಫಾ ವೈರಸ್ ಹಿನ್ನಲೆ ಕೊಲ್ಲೂರು ದೇವಸ್ಥಾನದಲ್ಲಿ ಕೇರಳದ ಭಕ್ತರ ಮೇಲೆ ನಿಗಾ
ಉಡುಪಿ ಮೇ 24: ಉಡುಪಿಯ ಪ್ರಸಿದ್ದ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಅತಿ ಹೆಚ್ಚು ಕೇರಳದ ಭಕ್ತರು ಬರುವ ಹಿನ್ನೆಲೆಯಲ್ಲಿ ನಿಫಾ ವೈರಸ್ ಸೋಂಕಿನ ಕುರಿತು ನಿಗಾ ವಹಿಸಲಾಗುತ್ತಿದೆ.
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಲಾಯಕ್ಕೆ ಭೇಟಿ ನೀಡುವ ಕೇರಳ ಭಕ್ತರ ಮೇಲೆ ನಿಗಾ ಇರಿಸಲಾಗಿದ್ದು, ಜ್ವರ ಪೀಡಿತರ ಕುರಿತು ನಿಗಾ ವಹಿಸುವಂತೆ ಜಿಲ್ಲಾ ಆರೋಗ್ಯಾಧಿಕಾರಿಗಳು ಸೂಚನೆ ನೀಡಿದ್ದಾರೆ. ನಿಫಾ ಮಾರಕ ವೈರಸ್ ಕೇರಳದಲ್ಲಿ ಹಲವರನ್ನು ಬಲಿ ಪಡೆದಿದೆ.

ಈಗ ಬೇಸಿಗೆ ರಜೆ ಇರುವ ಕಾರಣ ಕೇರಳದಿಂದ ಸಾವಿರಾರು ಜನ ಕೊಲ್ಲೂರಿಗೆ ಬರುತ್ತಿದ್ದಾರೆ.ಕೊಲ್ಲೂರಿಗೆ ಆಗಮಿಸುವ ಕೇರಳದ ಭಕ್ತರು, ಕೊಂಕಣ ರೈಲ್ವೆ ಮೂಲಕ ಮಂಗಳೂರಿನಿಂದ ಬೈಂದೂರು ರೈಲ್ವೆ ನಿಲ್ದಾಣಕ್ಕೆ ಆಗಮಿಸುತ್ತಾರೆ. ಹೀಗಾಗಿ ಬೈಂದೂರು ನಿಲ್ದಾಣದಲ್ಲೂ ಸಾಕಷ್ಟು ಎಚ್ಚರಿಕೆ ವಹಿಸಲಾಗುತ್ತಿದೆ.
ಕೊಲ್ಲೂರಿನಲ್ಲಿ ನಿಗಾ ವಹಿಸಲು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸೂಚಿಸಲಾಗಿದೆ. ನಿಫಾ ಕುರಿತು ಗೊಂದಲಕ್ಕೆ ಅವಕಾಶ ನೀಡದಂತೆ ,ಸ್ಪಷ್ಟ ಮಾರ್ಗದರ್ಶನ ಮತ್ತು ಮಾಹಿತಿ ನೀಡುವ ಕೆಲಸವನ್ನು ಆರೋಗ್ಯ ಇಲಾಖೆ ಮಾಡುತ್ತಿದೆ.