LATEST NEWS
ಖಗ್ರಾಸ ಚಂದ್ರಗ್ರಹಣ ಕೊಲ್ಲೂರು ದೇವಸ್ಥಾನದಲ್ಲಿ ಎಂದಿನಂತೆ ಪೂಜೆ , ಸೇವೆ

ಖಗ್ರಾಸ ಚಂದ್ರಗ್ರಹಣ ಕೊಲ್ಲೂರು ದೇವಸ್ಥಾನದಲ್ಲಿ ಎಂದಿನಂತೆ ಪೂಜೆ , ಸೇವೆ
ಉಡುಪಿ ಜುಲೈ 27: ಇಂದು ನಡೆಯುವ ಖಗ್ರಾಸ ಚಂದ್ರಗ್ರಹಣ ಕಾಲದಲ್ಲಿ ಉಡುಪಿಯ ಪ್ರಮುಖ ದೇವಸ್ಥಾನಗಳು ಎಂದಿನಂತೆ ಪೂಜೆ, ಸೇವೆಗಳು ನಡೆಯುತ್ತವೆ.
ಖಗ್ರಾಸ ಚಂದ್ರ ಗ್ರಹಣ ಹಿನ್ನೆಲೆ ಗ್ರಹಣ ಸಂದರ್ಭ ಉಡುಪಿಯ ಶ್ರೀ ಕೃಷ್ಣಮಠ ತೆರೆದಿರುತ್ತದೆ. ಗ್ರಹಣ ಆರಂಭವಾದ ಕೂಡಲೇ ಗ್ರಹಣ ಶಾಂತಿ ಹೋಮ ಆರಂಭವಾಗುತ್ತದೆ. ಮಠದಲ್ಲಿ ರಾತ್ರಿ ಪೂಜೆ 7.30 ಕ್ಕೆ ನಡೆಯಲಿದೆ. ಕೃಷ್ಣ ಮಠದಲ್ಲಿ ಪ್ರತಿದಿನ ನಡೆಯುವ ಮಧ್ಯಾಹ್ನ ಊಟದ ವ್ಯವಸ್ಥೆ ಇದ್ದು, ಉಪವಾಸ ಹಿನ್ನೆಲೆ ರಾತ್ರಿ ಊಟದ ವ್ಯವಸ್ಥೆಯಿರುವುದಿಲ್ಲ. ಗ್ರಹಣ ಬಿಟ್ಟ ಸಂದರ್ಭ ಹೋಮಕ್ಕೆ ಪರ್ಯಾಯ ಶ್ರೀಗಳಿಂದ ಪೂರ್ಣಾಹುತಿ, ಗ್ರಹಣ ಮಧ್ಯ ಕಾಲದಲ್ಲಿ ಶ್ರೀಕೃಷ್ಣನ ಮೂಲ ವಿಗ್ರಹಕ್ಕೆ ಆರತಿ ಮಾಡಲಾಗುತ್ತದೆ.

ಉಡುಪಿ ಜಿಲ್ಲೆಯ ಪ್ರಮುಖ ದೇವಸ್ಥಾನ ಕೊಲ್ಲೂರು ದೇವಳ ಚಂದ್ರಗ್ರಹಣ ಕಾಲದಲ್ಲಿ ಭಕ್ತರಿಗೆ ತೆರೆದಿರುತ್ತದೆ. ಚಂದ್ರಗ್ರಹಣ ಹಿನ್ನೆಲೆಯಲ್ಲಿ ಕೊಲ್ಲೂರು ಮೂಕಾಂಬಿಕಾ ದೇವಿ ದೇವಸ್ಥಾನ ರಾತ್ರಿಯಿಡೀ ತೆರಿದ್ದಿದ್ದು, ಭಕ್ತಾಭಿಮಾನಿಗಳಿಗೆ ಜಪ ತಪ ಮಾಡಲು ಅವಕಾಶ ನೀಡಲಾಗಿದೆ. ಮಧ್ಯಾಹ್ನ, ರಾತ್ರಿ ಪೂಜೆ ಎಂದಿನಂತೆ ನಡೆಯುತ್ತದೆ. ಗ್ರಹಣ ಬಿಟ್ಟ ನಂತರ ದೇವಿಗೆ ವಿಶೇಷ ಮಹಾಪೂಜೆ ನಡೆಯುತ್ತದೆ. ಭಕ್ತರಿಗೆ ಮಧ್ಯಾಹ್ನ ಊಟ ಇರುತ್ತದೆ.