KARNATAKA
ಹಳ್ಳಿ ಹಳ್ಳಿಯಲ್ಲಿ ಕೊರೊನಾ ಮರಣ ಮೃದಂಗ : ಕೋಡಿಮಠ ಶ್ರೀ
ಹಾಸನ, ಜುಲೈ 21 : ಮುಂದಿನ ಮೂರು ತಿಂಗಳಲ್ಲಿ ಕೊರೊನಾ ರಾಜ್ಯದ ಹಳ್ಳಿ ಹಳ್ಳಿಗೆ ಎಂಟ್ರಿ ಆಗಲಿದ್ದು ಅಶ್ವಿಜ ಮತ್ತು ಕಾರ್ತಿಕ ಮಾಸದಲ್ಲಿ ಮರಣ ಮೃದಂಗ ಬಾರಿಸಲಿದೆ ಎಂದು ಕೋಡಿಮಠದ ಶ್ರೀ ಶಿವಾನಂದ ಶಿವಾಚಾರ್ಯ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ಹೀಗಾಗಿ ಹಳ್ಳಿಗಳ ಜನರು ಎಚ್ಚರದಿಂದ ಇರಬೇಕು. ಸ್ಚಚ್ಛತೆ, ಸುರಕ್ಷತೆ, ಅಂತರ ಕಾಪಾಡಿಕೊಳ್ಳಬೇಕು. ಸರ್ಕಾರದ ನಿಯಮ ಕಟ್ಟುನಿಟ್ಟಾಗಿ ಪಾಲಿಸಿ ಎಂದು ಸ್ವಾಮೀಜಿ ಸಲಹೆ ಮಾಡಿದ್ದಾರೆ.
ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನಲ್ಲಿರುವ ಕೋಡಿ ಮಠದಲ್ಲಿ ಶ್ರೀಗಳು ಈ ಮಾತು ಹೇಳಿದ್ದು ಜನರು ಸ್ಚಚ್ಚತೆ, ಆಚಾರ, ವಿಚಾರ ಕೈಬಿಟ್ಟಿದ್ದಕ್ಕೆ ಈ ಮಾಹಾಮಾರಿ ಹೊಡೆತ ಕೊಟ್ಟಿದೆ. ಧರ್ಮದ ಹೆಸರಿನ ಆಚರಣೆಗಳು ರೋಗ ರುಜಿನ ತಡೆಯುತ್ತಿದ್ದವು.ಆದರೆ ಆಧುನಿಕತೆ ಹೆಸರಿನಲ್ಲಿ ಅವೆಲ್ಲವೂ ಮಾಯವಾಗಿವೆ. ಕೊರೊನಾ ಎಂಬುದು ಗಂಟಲು ಬೇನೆ ಎಂಬ ಹಳೆಯ ಕಾಯಿಲೆ.
ಅದು ಗಾಳಿಯಲ್ಲಿ ಸಂಚರಿಸಿ ಹರಡೋದು ಕಡಿಮೆ ಎಂದು ಹೇಳಿದ್ದಾರೆ.
ಸರ್ಕಾರದ ತೀರ್ಮಾನಗಳು ಕೊರೊನಾ ಕಾಯಿಲೆ ಹೆಚ್ಚುವಂತೆ ಮಾಡಿವೆ. ಹಿಂದೆಯೇ ಮತ್ತೊಂದು ತಿಂಗಳು ಲಾಕ್ ಡೌನ್ ಮುಂದುವರೆಸಿದ್ದರೆ ಕೊರೊನಾ ಕಡಿಮೆಯಾಗುತ್ತಿತ್ತು. ನಡುವೆ ಓಪನ್ ಮಾಡಿದ್ದರಿಂದ ಸೋಂಕು ವಿಪರೀತವಾಗಿ ಈಗ ನಿಯಂತ್ರಣಕ್ಕೆ ಬಾರದಂತಾಗಿದೆ. ಸರ್ಕಾರ ತನ್ನ ಆರ್ಥಿಕ ದೃಷ್ಟಿಯಿಂದ ಹೆಂಡದಂಗಡಿ ತೆರೆಸಿತು. ಆದ್ರೆ ಜನರಿಗೆ ಬೇಕಾಗಿದ್ದ ದೇಗುಲ ಮುಚ್ಚಿಬಿಡ್ತು. ವಿನಾಶಕಾರಿ ಮದ್ಯ ಮಾರಾಟಕ್ಕೆ ಅವಕಾಶ ನೀಡಿ, ಜನರು ನಂಬಿದ್ದ ಧಾರ್ಮಿಕ ಕೇಂದ್ರ ಮುಚ್ಚಿದಿರಿ.. ಇದರಿಂದಲೇ ದೇವರ ಅವಕೃಪೆಗೆ ಪಾತ್ರವಾಗುವಂತಾಗಿದೆ. ಸರ್ಕಾರದ ತಪ್ಪು ನಿರ್ಧಾರದಿಂದಲೇ ಕೊರೊನಾ ಹೆಚ್ಚಾಗಿದೆ ಎಂದು ಕೋಡಿ ಶ್ರೀ ಆಕ್ರೋಶ ಹೊರಹಾಕಿದ್ರು.
ಜನರು ಸುರಕ್ಷತೆ ಕಾಪಾಡಿದರೆ ಯಾವುದೇ ಔಷಧಿ ಇಲ್ಲದೆ ಕೊರೊನಾದಿಂದ ಪಾರಾಗಬಹುದು. ಜನರು ಭಯ, ಆತಂಕಪಡೋ ಅಗತ್ಯ ಇಲ್ಲ. ಆದರೆ, ಪ್ರಕೃತಿ ಮೇಲೆ ಮನುಷ್ಯ ಮಾಡಿದ ದಬ್ಬಾಳಿಕೆಯಿಂದ ಪ್ರಕೃತಿ ಈಗ ಮುನಿದಿದೆ. ಪ್ರಕೃತಿ ಮುನಿದಿದ್ರಿಂದಲೇ ಕೊರೊನಾ ಬಂದಿದೆ ಎಂದು ಹೇಳಿದರು.
https://youtu.be/mAk3qKjqGKs