LATEST NEWS
ನಾರ್ವೆ- ರನ್ ವೇ ಯಿಂದ ಜಾರಿದ ವಿಮಾನ – 182 ಪ್ರಯಾಣಿಕರು ಸೇಫ್
ಆಮ್‌ಸ್ಟರ್‌ಡ್ಯಾಮ್ ಡಿಸೆಂಬರ್ 29: ವಿಮಾನ ಯಾನ ಕ್ಷೇತ್ರದಲ್ಲಿ ಇದೀಗ ಅಲ್ಲೋಲ ಕಲ್ಲೊಲ ಸ್ಥಿತಿ ಉಂಟಾಗಿದೆ. ಸರಣಿಯಾಗಿ ಪ್ರಯಣಿಕ ವಿಮಾನಗಳು ಪತನವಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಮುಯಾನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ಬೆಳಿಗ್ಗೆ ಇಳಿಯುತ್ತಿದ್ದ ‘ಜೆಜು ಏರ್’ ವಿಮಾನ ಅಪಘಾತಕ್ಕೀಡಾಗಿದೆ. ದುರ್ಘಟನೆಯಲ್ಲಿ 179 ಮಂದಿ ಮೃತಪಟ್ಟಿದ್ದರು.
ಇದರ ಬೆನ್ನಲ್ಲೇ ನಾರ್ವೆಯ ಓಪ್ಲೋ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದ ಡಚ್ ವಿಮಾನಯಾನ ಸಂಸ್ಥೆ ಕೆಎಲ್‌ಎಂನ ಬೋಯಿಂಗ್ 737 ವಿಮಾನ, ರನ್ ವೇ ಬಿಟ್ಟು ಪಕ್ಕದ ಹುಲ್ಲಿನ ಹಾಸಿನ ಮೇಲೆ ಜಾರಿದ ಘಟನೆ ಶನಿವಾರ ನಡೆದಿದೆ. ವಿಮಾನದಲ್ಲಿದ್ದ 182 ಮಂದಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಓಸ್ತೋ ವಿಮಾನ ನಿಲ್ದಾಣದಿಂದ ಆಮ್‌ಸ್ಟರ್‌ಡ್ಯಾಮ್ ಗೆ ಹೊರಟಿದ್ದ ಬೋಯಿಂಗ್ 737 ವಿಮಾನದಲ್ಲಿ ಟೇಕಾಫ್ ಆದ ಸ್ವಲ್ಪ ಸಮಯದ ನಂತರ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ತಕ್ಷಣ ಎಚ್ಚೆತ್ತ ಸಿಬ್ಬಂದಿ ಓಪ್ಪೋದಿಂದ ದಕ್ಷಿಣಕ್ಕೆ 110 ಕಿ.ಮೀ ದೂರದಲ್ಲಿರುವ ಓಸ್ಟೋ ಟಾರ್ಪ್ ಸ್ಯಾಂಡೆಫೋರ್ಡ್ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಒಂದು ವಾರದಿಂದ ಇದು ಮೂರನೇ ವಿಮಾನ ಅಪಘಾತ ಪ್ರಕರಣ ಇದಾಗಿದೆ.