Connect with us

LATEST NEWS

ಕೊಹ್ಲಿ ಬಳಿಕ ಟೀಂ ಇಂಡಿಯಾ ಕ್ಯಾಪ್ಟನ್ ಕೆಎಲ್ ರಾಹುಲ್- ಆಕಾಶ್ ಚೋಪ್ರಾ ಭವಿಷ್ಯ

ನವದೆಹಲಿ: ವಿರಾಟ್ ಕೊಹ್ಲಿ ಬಳಿಕ ಟೀಂ ಇಂಡಿಯಾ ನಾಯಕತ್ವವನ್ನು ಕೆಎಲ್ ರಾಹುಲ್ ವಹಿಸಿಕೊಳ್ಳುವ ಅವಕಾಶವಿದೆ ಎಂದು ಟೀಂ ಇಂಡಿಯಾ ಮಾಜಿ ಆಟಗಾರ ಆಕಾಶ್ ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ.

ಫೇಸ್‍ಬುಕ್‍ನಲ್ಲಿ ಅಭಿಮಾನಿಗಳೊಂದಿಗೆ ಚಾಟ್ ನಡೆಸಿದ ಆಕಾಶ್ ಚೋಪ್ರಾ ಪ್ರಶ್ನೆಯೊಂದಕ್ಕೆ ಉತ್ತರಿಸಿ, ಟೀಂ ಇಂಡಿಯಾ ನಾಯಕತ್ವ ಸ್ಥಾನದಿಂದ ಕೊಹ್ಲಿ ಕೆಳಗಿಳಿಯುವ ವೇಳೆಗೆ ಜವಾಬ್ದಾರಿ ವಹಿಸಿಕೊಳ್ಳಲು ರಾಹುಲ್ ಸಿದ್ಧರಾಗಿರುತ್ತಾರೆ ಎಂದಿದ್ದಾರೆ.

ಐಪಿಎಲ್ 2020ರ ಆವೃತ್ತಿಯಲ್ಲಿ ಕೆಎಲ್ ರಾಹುಲ್ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಕ್ಯಾಪ್ಟನ್ ಆಗಿ ಹೇಗೆ ಮುನ್ನಡೆಸಲಿದ್ದಾರೆ. ಭವಿಷ್ಯದಲ್ಲಿ ಭಾರತದ ತಂಡವನ್ನು ಹೇಗೆ ಮುನ್ನಡೆಸುತ್ತಾರೆ ಎಂದು ಅಭಿಮಾನಿಯೊಬ್ಬರು ಪ್ರಶ್ನಿಸಿದ್ದರು. ಈ ಕುರಿತು ಪ್ರತಿಕ್ರಿಯಿಸಿದ ಚೋಪ್ರಾ, ರಾಹುಲ್ ನಾಯಕನಾಗಿ ಅತ್ಯುತ್ತಮ ಪ್ರದರ್ಶನ ನೀಡುತ್ತಾರೆ ಎಂಬ ನಂಬಿಕೆ ಇದೆ. ಆತನ ನಾಯಕತ್ವದ ಭವಿಷ್ಯ ಬಗ್ಗೆ ಈ ಬಾರಿಯ ಟೂರ್ನಿಯಲ್ಲಿ ಸ್ಪಷ್ಟತೆ ಸಿಗಲಿದೆ. ಈ ಟೂರ್ನಿಯಿಂದ ರಾಹುಲ್‍ಗೆ ನಾಯಕತ್ವದ ಕುರಿತು ಹೆಚ್ಚಿನ ಜಾಗೃತಿ ಮೂಡಲಿದೆ. ಎದುರಾಳಿ ತಂಡದ ವಿರುದ್ಧ ಎಂತಹ ವ್ಯೂಹ ರಚಿಸಲಿದ್ದಾರೆ, ಹೇಗೆ ರನ್ ಗಳಿಸಲಿದ್ದಾರೆ ಎಂಬುವುದು ತಿಳಿಯಲಿದೆ ಎಂದಿದ್ದಾರೆ.

ಕೊಹ್ಲಿ, ರೋಹಿತ್ ಅವರನ್ನು ಗಮನಿಸಿದರೆ ಒಂದು ಅಂಶ ನಮಗೇ ಸ್ಪಷ್ಟವಾಗುತ್ತದೆ. ಇಬ್ಬರೂ ಒಂದೇ ವಯಸ್ಸಿನವರಾಗಿದ್ದು, ಒಂದು ಹಂತಕ್ಕೆ ಬಂದ ಬಳಿಕ ನಾಯಕರಾಗಿ ಗುರುತಿಸಿಕೊಂಡಿದ್ದರು. ಧೋನಿರಂತೆ ಕೊಹ್ಲಿ ಕೂಡ ಒಂದು ದಿನ ನಾಯಕತ್ವದ ಜವಾಬ್ದಾರಿಯನ್ನು ಮತ್ತೊಬ್ಬರಿಗೆ ನೀಡಬೇಕಾಗುತ್ತದೆ. ಆ ಸಂದರ್ಭದಲ್ಲಿ ರಾಹುಲ್ ಮೊದಲ ಸ್ಥಾನದಲ್ಲಿರುತ್ತಾರೆ. ಇದುವರೆಗೂ ಆತನ ಆಟದ ಶೈಲಿ, ವ್ಯವಹಾರದ ಶೈಲಿಯನ್ನು ಗಮನಿಸಿದ ಸಂದರ್ಭದಲ್ಲಿ ಆತ ಕ್ಯಾಪ್ಟನ್ ಆಗಿ ಅತ್ಯುತ್ತಮ ರೀತಿಯಲ್ಲಿ ತಂಡವನ್ನು ಮುನ್ನಡೆಸುವ ನಂಬಿಕೆ ಇದೆ ಎಂದರು.

https://twitter.com/lionsdenkxip/status/1302586801446555648

ಕಳೆದ 12 ಐಪಿಎಲ್ ಆವೃತ್ತಿಗಳಲ್ಲಿ ಪಂಜಾಬ್ ಒಮ್ಮೆಯೂ ಟೈಟಲ್ ಗೆಲುವು ಪಡೆದಿಲ್ಲ. ಟೂರ್ನಿಯಲ್ಲಿ ಒಮ್ಮೆ ಫೈನಲ್ ಪ್ರವೇಶ ಮಾಡಿದ್ದ ಪಂಜಾಬ್ ಕಪ್ ಗೆಲ್ಲುವಲ್ಲಿ ವಿಫಲವಾಗಿತ್ತು. ಈ ಬಾರಿ ಕೆಎಲ್ ರಾಹುಲ್ ತಂಡದ ನಾಯಕತ್ವವನ್ನು ವಹಿಸಿಕೊಂಡಿದ್ದು, ಕೋಚ್ ಅನಿಲ್ ಕುಂಬ್ಳೆ ಮಾರ್ಗದರ್ಶನದಲ್ಲಿ ಟೈಟಲ್ ಗೆಲ್ಲುವ ಗುರಿ ಹೊಂದಿದೆ. ಉಳಿದಂತೆ ಪಂಜಾಬ್ ತಂಡ ಭಾನುವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಪಂದ್ಯದೊಂದಿಗೆ 2020ರ ಜರ್ನಿಯನ್ನು ಆರಂಭಿಸಲಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *