Connect with us

    LATEST NEWS

    ಡ್ರಗ್ಸ್ ಸಾಗಾಟ ಪ್ರಕರಣ, ಡ್ಯಾನ್ಸರ್ ಕಿಶೋರ್ ಶೆಟ್ಟಿ ಹಾಗೂ ಸಹಚರ ಏಳು ದಿನಗಳ ಪೋಲೀಸ್ ಕಸ್ಟಡಿಗೆ

    ಮಂಗಳೂರು ಸೆಪ್ಟೆಂಬರ್ 21: ಡ್ರಗ್ಸ್ ಸಾಗಾಟದ ವೇಳೆ ಸಿಕ್ಕಿ ಬಿದ್ದ ಬಾಲಿವುಡ್ ನಟ ಹಾಗೂ ಡ್ಯಾನ್ಸರ್ ಕಿಶೋರ್ ಶೆಟ್ಟಿ ಹಾಗೂ ಆತನ ಸ್ನೇಹಿತ ಅಕೀಲ್ ನೌಶೀಲ್ ಗೆ ಏಳು ದಿನಗಳ ಪೋಲೀಸ್ ಕಸ್ಟಡಿ ನೀಡಿ ದಕ್ಷಿಣಕನ್ನಡ ಜಿಲ್ಲಾ ನ್ಯಾಯಾಲಯ ಆದೇಶಿಸಿದೆ.


    ಮಂಗಳೂರಿನಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಪೋಲೀಸರು ಕಿಶೋರ್ ಅಮನ್ ಶೆಟ್ಟಿ ಹಾಗೂ ಅಕೀಲ್ ನೌಶೀಲ್ ಬಂಧಿಸಿ ಅವರಿಂದ ಮಾಧಕ ವಸ್ತುಗಳನ್ನು ವಶಕ್ಕೆ ಪಡೆದಿದ್ದರು.

    ಈ ಸಂಬಂಧ ತನಿಖೆ ನಡೆಸುತ್ತಿದ್ದ ಪೋಲೀಸರು ಆರೋಪಿಗಳನ್ನು ಭಾನುವಾರ ಮಂಗಳೂರು ನ್ಯಾಯಾಧೀಶರ ಮನೆಗೆ ಹಾಜರುಪಡಿಸಿದ್ದು, ಆರೋಪಿಗಳನ್ನು ತನಿಖೆಗಾಗಿ ತಮ್ಮ ವಶಕ್ಕೆ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಪೋಲೀಸರ ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ ಇಬ್ಬರು ಆರೋಪಿಗಳನ್ನು ಏಳು ದಿನಗಳ ಪೋಲೀಸ್ ಕಸ್ಟಡಿಗೆ ನೀಡಿದೆ.


    ಬಾಲಿವುಡ್ ನಲ್ಲಿ ಡ್ಯಾನ್ಸರ್ ಹಾಗೂ ಒಂದು ಚಿತ್ರದಲ್ಲಿ ನಟಿಸಿರುವ ಕಿಶೋರ್ ಅಮನ್ ಶೆಟ್ಟಿ ಸ್ವತಹ ಒರ್ವ ಡ್ರಗಿಸ್ಟ್ ಆಗಿದ್ದ ಎನ್ನುವುದು ತನಿಖೆಯಿಂದ ತಿಳಿದುಬಂದಿದೆ. ಈ ಹಿನ್ನಲೆಯಲ್ಲಿ ಈತನಿಗೆ ಡ್ರಗ್ಸ್ ಪೂರೈಸುತ್ತಿದ್ದ ವ್ಯಕ್ತಿಗಳ ಹಾಗೂ ಈತನ ಜೊತೆಗೆ ಸಂಬಂಧವಿರಿಸಿ ಕೊಂಡಿರುವ ವ್ಯಕ್ತಿಗಳ ಬಗ್ಗೆಯೂ ಪೋಲೀಸರು ಮಾಹಿತಿ ಕಲೆಹಾಕುವ ಸಾಧ್ಯತೆಯಿದೆ.

    ಕಿಶೋರ್ ಅಮನ್ ಶೆಟ್ಟಿ ಕೊರೊನಾ ಲಾಕ್ ಡೌನ್ ಘೋಷಣೆಯಾದ ಬಳಿಕ ಮುಂಬೈ ನಿಂದ ಮಂಗಳೂರಿಗೆ ಬಂದಿದ್ದ. ಸರಿಯಾದ ಕೆಲಸವಿಲ್ಲದ ಕಾರಣ ಮನೆ ನಡೆಸುವುದು ಕಷ್ಟವಾದ ಕಾರಣ ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದ ಎನ್ನುವ ಮಾಹಿತಿಯೂ ಲಭ್ಯವಾಗಿದೆ.

    ಈ ಕಾರಣಕ್ಕಾಗಿ ಈತ ತನ್ನ ಮುಂಬೈಯ ಸ್ನೇಹಿತರ ಜೊತೆಗೆ ಸಂಪರ್ಕವಿರಿಸಿಕೊಂಡಿದ್ದು, ಅವರಿಂದ ಡ್ರಗ್ಸ್ ಅನ್ನು ಮಂಗಳೂರಿಗೆ ತರಿಸಿಕೊಳ್ಳುತ್ತಿದ್ದ. ಮುಂಬೈನಿಂದ ಬಂದ ಡ್ರಗ್ಸ್ ಗಳನ್ನು ಕಿಶೋರ್ ಹಾಗೂ ನೌಶೀದ್ ಸೇರಿ ಮಂಗಳೂರಿನ ಕೆಲವು ಕಡೆಗಳಲ್ಲಿ ಮಾರಾಟ ಮಾಡುತ್ತಿದ್ದರು ಎನ್ನುವ ವಿಚಾರವನ್ನು ಆರೋಪಿಗಳನ್ನು ಪೋಲೀಸ್ ತನಿಖೆಯಲ್ಲಿ ಒಪ್ಪಿಕೊಡಿದ್ದಾರೆ ಎನ್ನಲಾಗಿದೆ.

    ಈ ಹಿನ್ನಲೆಯಲ್ಲಿ ಆರೋಪಿಗಳನ್ನು ಇನ್ನಷ್ಟು ತನಿಖೆ ನಡೆಸಿ ಡ್ರಗ್ಸ್ ಜಾಲವನ್ನು ಭೇಧಿಸುವ ನಿಟ್ಟಿನಲ್ಲಿ ಪೋಲೀಸ್ ಕಸ್ಟಡಿಗೆ ಪಡೆಯಲಾಗಿದೆ. ಕಿಶೋರ್ ಶೆಟ್ಟಿ ಜೊತೆಗೆ ಚಿತ್ರರಂಗದ ಕೆಲವು ವ್ಯಕ್ತಿಗಳೂ ಸಂಪರ್ಕ ಹೊಂದಿರುವ ಬಗ್ಗೆಯೂ ಪೋಲೀಸರು ಮಾಹಿತಿ ಕಲೆಹಾಕಿದ್ದಾರೆ

    Share Information
    Advertisement
    Click to comment

    You must be logged in to post a comment Login

    Leave a Reply