BELTHANGADI
ಕೊರೊನಾಗೆ ಹೆದರಿ ಹೊಮ್ ಕ್ವಾರಂಟೈನ್ ಆಗಲು ಬಂದ ಕಾಳಿಂಗ ಸರ್ಪ…!
ಕೊರೊನಾಗೆ ಹೆದರಿ ಹೊಮ್ ಕ್ವಾರಂಟೈನ್ ಆಗಲು ಬಂದ ಕಾಳಿಂಗ ಸರ್ಪ…!
ಬೆಳ್ತಂಗಡಿ ಎಪ್ರಿಲ್ 1: ಕೊರೊನಾ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮವಾಗಿ ವಿದೇಶಗಳಿಂದ ಬಂದವರಿಗೆ ಕಡ್ಡಾಯ ಹೋಂ ಕ್ವಾರೈಂಟೈನ್ ಗೆ ಸೂಚಿಸಲಾಗಿದೆ. ಆದರೆ ಮನೆಯಲ್ಲಿ ಕುಳಿತುಕೊಳ್ಳುವ ಬದಲು ಊರೂರು ಸುತ್ತಾಡುತ್ತಿಡುವ ಮೂಲಕ ನಕರಾ ಮಾಡುವ ವ್ಯಕ್ತಿಗಳು ಸಾಕಷ್ಟಿದ್ದಾರೆ.
ಆದರೆ ಎಲ್ಲೆಂದರಲ್ಲಿ ಹರಿದಾಡಬೇಕಾಗಿದ್ದ ಕಾಳಿಂಗ ಸರ್ಪವೊಂದು ಸ್ವಯಂ ಹೋಂ ಕ್ವಾರೈಂಟೈನ್ ಗೆ ಒಳಗಾಗಿದೆ. ಹೌದು ಬೆಳ್ತಂಗಡಿ ತಾಲೂಕಿನ ಕೊಯ್ಯೂರು ಎಂಬಲ್ಲಿನ ರೋಹಿಣಿ ಎನ್ನುವವರ ಮನೆಯ ಅಡುಗೆ ಕೋಣೆಯಲ್ಲಿ ಈ ಹಾವು ಪತ್ತೆಯಾಗಿದೆ.
ಹಾವನ್ನು ಮನೆ ಮಂದಿ ಗಮನಿಸಿದ ಬಳಿಕ ಸ್ಥಳೀಯ ಹಾವು ಹಿಡಿಯುವವರ ಸಹಾಯದ ಮೂಲಕ ಹಾವನ್ನು ಕಾಡಿಗೆ ಬಿಡಲಾಗಿದೆ.ಮನೆಯ ಒಳಗಡೆ ಇರಬೇಕಾದವರು ಊರೂರು ಸುತ್ತುತ್ತಿರುವಾಗ ಹೊರಗಡೆಯಿರುವ ಪ್ರಾಣಿಗಳು ಇದೀಗ ಮನೆ ಒಳಗೆ ಬರುತ್ತಿರುವುದು ಯಾವ ಕಾಲದ ಮಹಿಮೆ ಎನ್ನುವ ಲೆಕ್ಕಾಚಾರದಲ್ಲೂ ಜನರಿದ್ದಾರೆ.