BELTHANGADI
ಬೆಳ್ತಂಗಡಿ – ಬಚ್ಚಲು ಮನೆಯಲ್ಲಿ ಅಡಗಿದ್ದ ಬೃಹತ್ ಗಾತ್ರದ ಕಾಳಿಂಗ ಸರ್ಪ
ಬೆಳ್ತಂಗಡಿ: ಬೆಳ್ತಂಗಡಿ ತಾಲ್ಲೂಕಿನ ಅಳದಂಗಡಿಯ ಕೆದ್ದುವಿನ ಮನೆಯೊಂದರ ಸ್ನಾನಗೃಹದಲ್ಲಿ ಸುಮಾರು 14 ಅಡಿ ಉದ್ದದ ಕಾಳಿಂಗ ಸರ್ಪ ಕಾಣಿಸಿಕೊಂಡಿದ್ದು, ಆತಂಕಕ್ಕೆ ಕಾರಣವಾಗಿತ್ತು. ಸ್ಥಳಕ್ಕೆ ಆಗಮಿಸಿದ ಸ್ನೇಕ್ ಅಶೋಕ್ ಕಾಳಿಂಗ ಸರ್ಪವನ್ನು ರಕ್ಷಣೆ ಮಾಡಿ, ಕಾಡಿಗೆ ಬಿಟ್ಟಿದ್ದಾರೆ.
ಅಳದಂಗಡಿ, ಕೆದ್ದು ನಿವಾಸಿ ಗೋಪಾಲಕೃಷ್ಣ ಭಟ್ ಅವರ ಜಿ.ಕೆ.ಫಾರ್ಮ್ಸ್ ಮನೆಯ ಸ್ನಾನ ಗೃಹದಲ್ಲಿ ಕಾಳಿಂಗ ಸರ್ಪ ಕಾಣಿಸಿಕೊಂಡಿದ್ದು, ಮನೆಯವರು ಮುಖ ತೊಳೆಯಲು ಒಳಗಡೆ ಹೋಗಿದ್ದಾರೆ, ಈ ವೇಳೆ ಒಳಗಡೆಯಿಂದ ಶಬ್ದ ಕೇಳಿಸಿದ್ದು ಕೂಡಲೇ ಅಂತಕದಿಂದ ಹೊರಗಡೆ ಓಡಿ ಬಂದಿದ್ದಾರೆ. ನಂತರ ಪರಿಶೀಲನೆ ನಡೆಸಿದಾಗ ಕಾಳಿಂಗ ಸರ್ಪ ಅವಿತು ಕುಳಿತಿತ್ತು. ತಕ್ಷಣ ಲಾಯಿಲಾದ ಉರಗ ಪ್ರೇಮಿ ಸ್ನೇಕ್ ಅಶೋಕ್ ಅವರಿಗೆ ಕರೆ ಮಾಡಿ ಮಾಹಿತಿ ತಿಳಿಸಿ ಮನೆಗೆ ಕರೆಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಸ್ನೇಕ್ ಅಶೋಕ್ ಕಾಳಿಂಗ ಸರ್ಪವನ್ನು ರಕ್ಷಣೆ ಮಾಡಿ, ಕಾಡಿಗೆ ಬಿಟ್ಟಿದ್ದಾರೆ.