Connect with us

    BELTHANGADI

    ಬೃಹತ್ ಗಾತ್ರದ ಹೆಬ್ಬಾವನ್ನೇ ನುಂಗಿದ ಕಾಳಿಂಗ ಸರ್ಪ….!!

    ಬೆಳ್ತಂಗಡಿ ಎಪ್ರಿಲ್ 20: ಬೃಹತ್ ಕಾಳಿಂಗ ಸರ್ಪವೊಂದು ಹೆಬ್ಬಾವನ್ನು ನುಂಗಿದ ಘಟನೆ ಬೆಳ್ತಂಗಡಿ ತಾಲೂಕಿನ ಪಿಲ್ಯದಲ್ಲಿ ನಡೆದಿದೆ. ಈ ಘಟನೆಯ ವಿಡಿಯೋ ಮೊಬೈಲ್ ನಲ್ಲಿ ಸೆರೆಯಾಗಿದೆ. ಸುಮಾರು 14 ಅಡಿ ಉದ್ದದ ಕಾಳಿಂಗ ಸರ್ಪ ಸುಮಾರು 9 ಅಡಿ ಉದ್ದದ ಹೆಬ್ಬಾವನ್ನು ನುಂಗಿದೆ.


    ಸ್ಥಳೀಯರು ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿ ಉರಗ ರಕ್ಷಕ ಬೆಳ್ತಂಗಡಿಯ ಸ್ನೇಕ್ ಅಶೋಕ್ ಅವರನ್ನು ಸ್ಥಳಕ್ಕೆ ಕರೆಸಲಾಯಿತು.ಹೆಬ್ಬಾವನ್ನು ನುಂಗಿದ್ದ ಕಾಳಿಂಗ ಸರ್ಪ ನಂತರ ಹೆಬ್ಬಾವನ್ನು ತನ್ನ ಹೊಟ್ಟೆಯಿಂದ ಹೊರಹಾಕಿದೆ.ಆ ಬಳಿಕ ಕಾಳಿಂಗ ಸರ್ಪವನ್ನು ಸ್ನೇಕ್ ಅಶೋಕ್ ಹಿಡಿದು ಅರಣ್ಯ ಇಲಾಖೆಗೆ ಹಸ್ತಾಂತರಿಸಿದ್ದು ಸುರಕ್ಷಿತವಾಗಿ ಕಾಡಿಗೆ ಬಿಡಲಾಯಿತು. ಕಾಳಿಂಗ ಸರ್ಪದ ದಾಳಿಗೆ ತುತ್ತಾದ ಹೆಬ್ಬಾವು ಸಾವನಪ್ಪಿದೆ.

    Share Information
    Advertisement
    Click to comment

    You must be logged in to post a comment Login

    Leave a Reply