Connect with us

FILM

ಬಿಗ್ ಬಾಸ್ ಬಳೆ ವಿವಾದ – ಕಿಚ್ಚ ಸುದೀಪ್ ನಿರೂಪಣೆಗೆ ಬೇಷ್ ಅಂದ ಪ್ರೇಕ್ಷಕರು

ಬೆಂಗಳೂರು: ಬಿಗ್ ಬಾಸ್ ಕನ್ನಡದ 10ಮೇ ಸೀಸನ್ ನಲ್ಲಿ ಈ ಬಾರಿ ಕಿಚ್ಚನ ಪಂಚಾಯ್ತಿನ ಎಲ್ಲರ ಗಮನ ಸೆಳೆದಿದ್ದು, ಬಿಗ್ ಬಾಸ್ ಮನೆಯಲ್ಲಿ ವಾರವೀಡಿ ನಡೆದ ಗಲಾಟೆ ಬಳಿಕ ಶನಿವಾರದ ಪಂಚಾಯ್ತಿಗಾಗಿಲ ವೀಕ್ಷಕರು ಕಾಯ್ದುಕುಳಿತಿದ್ದು, ಸುದೀಪ್ ನಡೆಸಿಕೊಟ್ಟ ರೀತಿ ಇದೀಗ ಎಲ್ಲರ ಪ್ರಶಂಸೆಗೆ ಕಾರಣವಾಗಿದೆ. ಸ್ಪರ್ಧಿಗಳ ಆಕ್ಷೇಪಾರ್ಹ ಮಾತುಗಳಿಗೆ ಖಡಕ್ ಉತ್ತರ ಸಿಕ್ಕಿದೆ. ಅದರಲ್ಲೂ ಹೆಚ್ಚು ಗಮನ ಸೆಳೆದಿದ್ದು, ಬಳೆ ಮಾತು.


ಬಿಗ್​ಬಾಸ್ ಮನೆಯಲ್ಲಿ ವಿನಯ್ ಆಡಿದ ಮಾತು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿತ್ತು. ಟಾಸ್ಕ್ ಒಂದನ್ನು ಆಡುವಾಗ ಎದುರಾಳಿ ತಂಡದ ಕಾರ್ತಿಕ್ ಅನ್ನು ಅವಮಾನಗೊಳಿಸುವ ಉದ್ದೇಶದಿಂದ ಬಳೆ ಹಾಕ್ಕೊಂಡು ಆಡು, ಬಳೆಗಳ ರಾಜ ಎಂದೆಲ್ಲ ವಿನಯ್ ಕರೆದಿದ್ದರು. ಆ ಮೂಲಕ ಬಳೆ ತೊಡುವವರೆಂದರೆ ಅಸಮರ್ಥರು, ಬಲಹೀನರು ಎಂಬರ್ಥದ ಮಾತುಗಳನ್ನು ಆಡಿದ್ದರು. ಇದು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿತ್ತು. ವಿನಯ್​ ಆಡಿದ ಮಾತನ್ನು ಸಂಗೀತಾ ಹೊರತಾಗಿ ಇನ್ಯಾರು ವಿರೋಧಿಸಿರಲಿಲ್ಲ. ಹಾಗಾಗಿ ಈ ವಿಷಯದ ಬಗ್ಗೆ ಸುದೀಪ್ ನಿಲುವೇನು ಎಂಬುದು ಜನರ ನಿರೀಕ್ಷೆಯಾಗಿತ್ತು. ನಿರೀಕ್ಷೆಗೆ ತಕ್ಕಂತೆ ಸುದೀಪ್ ಘನತೆಯಿಂದ ವಿಷಯವನ್ನು ಸಂಭಾಳಿಸಿರುವ ಜೊತೆಗೆ ಬಳೆಗೆ ಒಂದು ವಿಶೇಷ ಗೌರವವನ್ನು ಸಹ ಕೊಟ್ಟಿದ್ದಾರೆ.
ವಿನಯ್ ಪದೇ ಪದೇ ಬಳೆ ಬಗ್ಗೆ ಮಾತನಾಡುತ್ತಿದ್ದಾಗ ಮನೆಯ ಉಳಿದ ಮಹಿಳಾ ಸದಸ್ಯರು ನಿಲುವು ತೆಗೆದುಕೊಳ್ಳದ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿದ ಸುದೀಪ್, ನಕ್ಕು ಸುಮ್ಮನಾಗಿದ್ದ ನಮ್ರತಾ ಅವರಿಗೆ ಕ್ಲಾಸ್ ತೆಗೆದುಕೊಂಡರು. ವಾರಪೂರ್ತಿ ನಮಗೆ ನಿಮ್ಮಲ್ಲಿ ಕಂಡಿದ್ದು, ನಿಮ್ಮ ಕೈಯಲ್ಲಿರುವ ಚಮಚ ಮಾತ್ರ ಎನ್ನುವ ಮೂಲಕ ಯಾವುದೇ ನಿರ್ಧಾರಕ್ಕೂ ವಿನಯ್ ಮೇಲೆ ಅವಲಂಬಿತವಾಗುತ್ತಿದ್ದ ನಮ್ರತಾಗೆ ಚಾಟಿ ಬೀಸಿದರು.


ಕಾರ್ತಿಕ್ ಅವರನ್ನು ನೀವು ಬಳೆಗಳ ರಾಜ ಎಂದು ಕರೆದಿದ್ದೀರಿ. ಹೆಣ್ಣುಮಕ್ಕಳ ಜೊತೆಗಿದ್ದರೆ ಅವರೇಕೆ ಬಳೆಗಳ ರಾಜ ಆಗಬೇಕು. ಹೆಣ್ಣು ಮಕ್ಕಳೇಕೆ ಮೀಸೆಗಳ ರಾಣಿಯರು ಯಾಕೆ ಆಗಬಾರದು? ಎಂದು ಪ್ರಶ್ನಿಸಿದರು. ವಿನಯ್ ಅದಕ್ಕೆ ಸಮಜಾಯಿಷಿ ನೀಡಲು ಮುಂದಾದಾಗ ಮಧ್ಯಪ್ರೇಶಿಸಿದ ಸುದೀಪ್, ನಾವೇನು ಬಳೆ ಹಾಕಿಕೊಂಡು ನಿಂತಿಲ್ಲ ಎಂಬುದರ ಅರ್ಥವೇನು ಎಂದು ಪ್ರಶ್ನಿಸಿದರು. ಬಳೆ ಬಗ್ಗೆ ನಿಮ್ಮ ಅಭಿಪ್ರಾಯ ಏನು? ಕೆಲವರು ಅದನ್ನು ಶಕ್ತಿ ಎನ್ನುತ್ತಾರೆ, ಅಲಂಕಾರ ಎನ್ನುತ್ತಾರೆ, ಮತ್ತೆ ಕೆಲವರು ಶಕ್ತಿ ಎನ್ನುತ್ತಾರೆ, ನೀವು ಬಲಹೀನತೆ ಎನ್ನುವಂತೆ ಬಳಸಿದ್ದೀರಿ ಎಂದು ಸುದೀಪ್ ತರಾಟೆಗೆ ತೆಗೆದುಕೊಂಡರು. ಅದು ಶಕ್ತಿಯ ಸಂಕೇತವೇ ಹೊರತು ಬಲಹೀನತೆಯಲ್ಲ ಎಂದು ಸುದೀಪ್ ತಿಳಿ ಹೇಳಿದರು. ಸುದೀಪ್ ಮಾತುಗಳಿಂದ ತಣ್ಣಗಾದ ವಿನಯ್, ಇಡೀ ಕರ್ನಾಟಕದ ಕ್ಷಮೆ ಕೋರಿದರು.

 

ಅಲ್ಲದೆ ಬಳೆ ವಿವಾದಕ್ಕೆ ಅಂತ್ಯ ಹಾಡುವ ನಿಟ್ಟಿನಲ್ಲಿ ಸುದೀಪ್ ಈ ಬಾರಿ ಬಳೆಗೆ ಕಿಚ್ಚನ ಚಪ್ಪಾಳೆ ನೀಡಿದ್ದಾರೆ. ಟಾಸ್ಕ್ ವೇಳೆ ಬಳೆ ಹಾಕಿದ್ದೀನಿ ನೋಡು ಎಂದು ಸಂಗೀತಾ ತೋರಿಸಿದ ಕೈ ಚಿತ್ರಕ್ಕೆ ಈ ಬಾರಿ ಕಿಚ್ಚನ ಚಪ್ಪಾಳೆ ಸಿಕ್ಕಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *