LATEST NEWS
ಚಿನ್ನದ ಹುಡುಗ ನೀರಜ್ ಸೇರಿ 12 ಮಂದಿಗೆ ಖೇಲ್ ರತ್ನ: 35 ಕ್ರೀಡಾಪಟುಗಳಿಗೆ ಅರ್ಜುನ ಪ್ರಶಸ್ತಿ
ನವದೆಹಲಿ, ನವೆಂಬರ್ 03: ಟೋಕಿಯೊ ಒಲಿಂಪಿಕ್ಸ್‌ನ ‘ಚಿನ್ನದ ಹುಡುಗ’ ನೀರಜ್ ಚೋಪ್ರಾ ಮತ್ತು ಭಾರತ ಹಾಕಿ ತಂಡದ ನಾಯಕ ಮನ್‌ಪ್ರೀತ್ ಸಿಂಗ್ ಸೇರಿದಂತೆ 12 ಮಂದಿಗೆ ಮೇಜರ್ ಧ್ಯಾನಚಂದ್ ಖೇಲ್ ರತ್ನ ಪ್ರಶಸ್ತಿ ನೀಡಲಾಗಿದೆ. ಈಚೆಗೆ ಕ್ರೀಡಾ ಸಮಿತಿಯು ಮಾಡಿದ್ದ ಶಿಫಾರಸಿನಲ್ಲಿ 11 ಮಂದಿಯ ಹೆಸರುಗಳಿದ್ದವು. ಟೋಕಿಯೊದಲ್ಲಿ ಕಂಚಿನ ಪದಕ ಜಯಿಸಿದ ಭಾರತ ಹಾಕಿ ತಂಡದ ನಾಯಕ ಮನ್‌ಪ್ರೀತ್ ಅವರನ್ನು ಕೊನೆಯಲ್ಲಿ ಸೇರ್ಪೆಡ ಮಾಡಲಾಗಿದೆ. ಮಂಗಳವಾರ ಕ್ರೀಡಾ ಸಚಿವಾಲಯವು ಪ್ರಶಸ್ತಿ ಪುರಸ್ಕೃತರ ಪಟ್ಟಿ ಬಿಡುಗಡೆ ಮಾಡಲಾಗಿದೆ.
ಕನ್ನಡಿಗ, ಪ್ಯಾರಾ ಬ್ಯಾಡ್ಮಿಂಟನ್ ಆಟಗಾರ ಸುಹಾಸ್ ಯತಿರಾಜ್ ಸೇರಿದಂತೆ 35 ಸಾಧಕರಿಗೆ ಅರ್ಜುನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ನವೆಂಬರ್ 13ರಂದು ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಪ್ರಶಸ್ತಿ ಪುರಸ್ಕೃತರು:
ಮೇಜರ್ ಧ್ಯಾನಚಂದ್ ಖೇಲ್‌ರತ್ನ: ನೀರಜ್ ಚೋಪ್ರಾ (ಅಥ್ಲೆಟಿಕ್ಸ್), ರವಿಕುಮಾರ್ (ಕುಸ್ತಿ), ಲವ್ಲಿನಾ ಬೊರ್ಗೊಹೈನ್ (ಬಾಕ್ಸಿಂಗ್), ಪಿ.ಆರ್. ಶ್ರೀಜೇಶ್ (ಹಾಕಿ), ಅವನಿ ಲೇಖರಾ (ಪ್ಯಾರಾಶೂಟಿಂಗ್), ಸುಮಿತ್ ಅಂಟಿಲ್ (ಪ್ಯಾರಾ ಅಥ್ಲೆಟಿಕ್ಸ್), ಪ್ರಮೋದ್ ಭಗತ್, ಕೃಷ್ಣ ನಾಗರ್ (ಇಬ್ಬರೂ ಪ್ಯಾರಾ ಬ್ಯಾಡ್ಮಿಂಟನ್), ಮನೀಷ್ ನರ್ವಾಲ್ (ಪ್ಯಾರಾ ಶೂಟಿಂಗ್), ಮಿಥಾಲಿ ರಾಜ್ (ಕ್ರಿಕೆಟ್), ಸುನೀಲ್ ಚೆಟ್ರಿ (ಫುಟ್‌ಬಾಲ್), ಮನ್‌ಪ್ರೀತ್ ಸಿಂಗ್ (ಹಾಕಿ).
ಅರ್ಜುನ ಪ್ರಶಸ್ತಿ: ದಿಲ್‌ಪ್ರೀತ್ ಸಿಂಗ್, ಹರ್ಮನ್ ಪ್ರೀತ್ ಸಿಂಗ್, ರೂಪಿಂದರ್ ಪಾಲ್ ಸಿಂಗ್, ಸುರೇಂದರ್ ಕುಮಾರ್, ಅಮಿತ್ ರೋಹಿದಾಸ್, ಬಿರೇಂದ್ರ ಲಕ್ರಾ, ಸುಮಿತ್, ನೀಲಕಂಠ ಶರ್ಮಾ, ಹಾರ್ದಿಕ್ ಸಿಂಗ್, ವಿವೇಕ್ ಸಾಗರ್, ಪ್ರಸಾದ್, ಗುರ್ಜಂತ್ ಸಿಂಗ್, ಮನದೀಪ್ ಸಿಂಗ್, ಶಂಶೇರ್ ಸಿಂಗ್, ಲಲಿತ್ ಕುಮಾರ್ ಉಪಾಧ್ಯಾಯ, ವರುಣಕುಮಾರ್, ಸಿಮ್ರನ್‌ಜೀತ್ ಸಿಂಗ್ (ಎಲ್ಲರೂ ಹಾಕಿ), ಅರ್ಪಿಂದರ್ ಸಿಂಗ್ (ಅಥ್ಲೆಟಿಕ್ಸ್), ಸಿಮ್ರನ್‌ಜೀತ್ ಕೌರ್ (ಬಾಕ್ಸಿಂಗ್), ಶಿಖರ್ ಧವನ್ (ಕ್ರಿಕೆಟ್), ಸಿ.ಎ. ಭವಾನಿದೇವಿ (ಫೆನ್ಸಿಂಗ್), ಮೋನಿಕಾ (ಹಾಕಿ), ವಂದನಾ ಕಟಾರಿಯಾ (ಹಾಕಿ), ಸಂದೀಪ್ ನರ್ವಾಲ್ (ಕಬಡ್ಡಿ), ಹಿಮಾನಿ ಉತ್ತಮ್ ಪರಬ್ (ಮಲ್ಲಕಂಬ), ಅಭಿಷೇಕ್ ವರ್ಮಾ (ಶೂಟಿಂಗ್), ಅಂಕಿತಾ ರೈನಾ (ಟೆನಿಸ್), ದೀಪಕ್ ಪೂನಿಯಾ (ಕುಸ್ತಿ), ಯೋಗೇಶ್ ಖತುನಿಯಾ, ನಿಶಾದ್ ಕುಮಾರ್, (ಪ್ಯಾರಾ ಅಥ್ಲೆಟಿಕ್ಸ್), ಸುಹಾಸ್ ಯತಿರಾಜ್ (ಪ್ಯಾರಾ ಬ್ಯಾಡ್ಮಿಂಟನ್), ಸಿಂಗರಾಜ್ ಅದಾನಾ (ಪ್ಯಾರಾ ಶೂಟಿಂಗ್), ಭಾವಿನಾ ಪಟೇಲ್ (ಪ್ಯಾರಾ ಟಿಟಿ), ಹರವಿಂದರ್ ಸಿಂಗ್ (ಪ್ಯಾರಾ ಆರ್ಚರಿ), ಶರದ್ ಕುಮಾರ್(ಪ್ಯಾರಾ ಅಥ್ಲೆಟಿಕ್ಸ್).
ರಾಷ್ಟ್ರೀಯ ಕ್ರೀಡಾ ಪ್ರೋತ್ಸಾಹಕ ಪುರಸ್ಕಾರ: ಮಾನವರಚನಾ ಶಿಕ್ಷಣ ಸಂಸ್ಥೆ ಮತ್ತು ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್, ಮೌಲಾನಾ ಅಬುಲ್ ಕಲಾಂ ಆಜಾದ್ ಟ್ರೋಫಿ: ಪಂಜಾಬ್ ವಿಶ್ವವಿದ್ಯಾಲಯ, ಚಂಡೀಗಡ.