LATEST NEWS
ಯೂಟ್ಯೂಬ್ ನೋಡಿ ನಕಲಿ ನೋಟ್ ಮುದ್ರಣ ಮಾಡಿ ಸಿಕ್ಕಿಬಿದ್ದ ಖದೀಮ
ಮಹಾರಾಷ್ಟ್ರ, ಮಾರ್ಚ್ 05: ಜಲಗಾಂವ್ ಜಿಲ್ಲೆಯ ಮನೆಯೊಂದರಲ್ಲಿ ನಕಲಿ ನೋಟುಗಳನ್ನು ಮುದ್ರಿಸುತ್ತಿದ್ದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಈತ ಯೂಟ್ಯೂಬ್ ವೀಡಿಯೋಗಳ ಮೂಲಕ ನಕಲಿ ನೋಟು ಮುದ್ರಣ ಮಾಡುವುದನ್ನು ಕಲಿತಿರುವುದಾಗಿ ಶಾಕಿಂಗ್ ಹೇಳಿಕೆ ನೀಡಿದ್ದಾನೆ. ಆರೋಪಿಯು ಜಲಗಾಂವ್‌ನ ಕುಸುಂಬಾ ಗ್ರಾಮದಲ್ಲಿರುವ ತನ್ನ ನಿವಾಸದಲ್ಲಿ ಮುದ್ರಣ ಘಟಕವನ್ನು ಸ್ಥಾಪಿಸಿದ್ದನು.
ಆರೋಪಿಯು ತನ್ನ ಮನೆಯಲ್ಲಿ ಭಾರತೀಯ ನಕಲಿ ನೋಟುಗಳನ್ನು ಮುದ್ರಿಸುತ್ತಿದ್ದಾನೆ ಎಂದು ಜಲಗಾಂವ್‌ನ ಎಂಐಡಿಸಿ ಪೊಲೀಸರಿಗೆ ಸುಳಿವು ಸಿಕ್ಕಿತು. ನಂತರ ಪೊಲೀಸ್ ತಂಡ ದಾಳಿ ನಡೆಸಿ ಆರೋಪಿಯನ್ನು ರೆಡ್‌ಹ್ಯಾಂಡ್ ಆಗಿ ಬಂಧಿಸಿದ್ದಾರೆ.
ಈತ 50 ಸಾವಿರ ರೂಪಾಯಿ ಮುಖಬೆಲೆಯ ಸುಮಾರು 1.5 ಲಕ್ಷ ರೂಪಾಯಿ ನಕಲಿ ನೋಟುಗಳನ್ನು ಮುದ್ರಿಸಿ ಮಾರಾಟ ಮಾಡುತ್ತಿದ್ದುದನ್ನು ಪೊಲೀಸರು ತನಿಖೆಯ ವೇಳೆ ಪತ್ತೆ ಮಾಡಿದ್ದಾರೆ. ಈತನ ಜತೆ ಇನ್ನೂ ಕೆಲವರು ನಂಟು ಹೊಂದಿರುವ ಶಂಕೆ ವ್ಯಕ್ತವಾಗಿದ್ದು ತನಿಖೆ ನಡೆಸುತ್ತಿದ್ದಾರೆ.