LATEST NEWS
ಅಪಾಯಮಟ್ಟ ಮೀರಿ ಹರಿಯುತ್ತಿರುವ ಪಂಪಾ ನದಿ – ಇಂದು ಶಬರಿಮಲೆ ಯಾತ್ರೆ ಸ್ಥಗಿತ
ಕೇರಳ ನವೆಂಬರ್ 20: ಕೇರಳದಲ್ಲಿ ಮಳೆಯ ಅಬ್ಬರ ಹೆಚ್ಚಾಗಿದ್ದು, ಶಬರಿಮಲೆಯ ಪಂಪಾ ನದಿಯ ನೀರಿನ ಮಟ್ಟ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಹಿನ್ನಲೆ ಪತ್ತನಂತಿಟ್ಟ ಜಿಲ್ಲಾಡಳಿತ ಇಂದು ಶನಿವಾರ ಶಬರಿಮಲೆ ಯಾತ್ರೆಯನ್ನು ರದ್ದುಗೊಳಿಸಿದೆ.
ಪತ್ತನಂತಿಟ್ಟ ಜಿಲ್ಲಾಧಿಕಾರಿ ದಿವ್ಯ ಎಸ್ ಐಯ್ಯರ್, ಪಂಪಾದಿಂದ ಮುಂದೆ ಹೋಗಲು ಯಾತ್ರಿಕರಿಗೆ ಬಿಡುವುದಿಲ್ಲ, ಪಂಪಾ ನದಿಯು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ತ್ರಿವೇಣಿ ನದಿಯಲ್ಲಿ ಭಾರೀ ಹರಿವು ಇದೆ, ಶಬರಿಮಲೆ ಬೆಟ್ಟಗಳನ್ನು ಚಾರಣ ಮಾಡಲು ಅಯ್ಯಪ್ಪ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲು ನದಿಯನ್ನು ದಾಟಬೇಕಾಗುತ್ತದೆ. ಭಕ್ತರ ಜೀವದ ಸುರಕ್ಷತೆ ದೃಷ್ಟಿಯಿಂದ ಇಂದು ಯಾತ್ರೆಯನ್ನು ರದ್ದುಗೊಳಿಸಲಾಗಿದೆ ಎಂದಿದ್ದಾರೆ.
ಹೆಚ್ಚಿನ ಒಳಹರಿವಿನಿಂದಾಗಿ ಕಕ್ಕಿ-ಆನಾತೋಡ್ ಅಣೆಕಟ್ಟು ಮತ್ತು ಪಂಬಾ ಅಣೆಕಟ್ಟುಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ನಿನ್ನೆ ರಾತ್ರಿ ತ್ರಿವೇಣಿ ನದಿಯ ದಡದಲ್ಲಿ ಪಂಪಾ ನದಿ ಉಕ್ಕಿ ಹರಿದಿದ್ದು, ಭಕ್ತರು ನದಿ ದಾಟಿದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಇಂದು ಯಾತ್ರೆಯನ್ನು ಸ್ಥಗಿತಗೊಳಿಸಿದೆ. ನಿಲಕ್ಕಲ್‌ನಲ್ಲಿ ತಂಗಿರುವ ಭಕ್ತರಿಗೆ ಅವರ ಸುರಕ್ಷತೆಯನ್ನು ಖಾತ್ರಿಪಡಿಸಿದ ನಂತರ ಇಂದು ದರ್ಶನಕ್ಕೆ ಅವಕಾಶ ನೀಡಲಾಗುವುದು ಎಂದು ಕೂಡ ತಿಳಿಸಿದ್ದಾರೆ.