LATEST NEWS
ಕೇರಳ ವಯನಾಡು ಗುಡ್ಡ ಕುಸಿತ, 90 ರ ಗಡಿ ದಾಟಿದ ಸಾವಿನ ಸಂಖ್ಯೆ, ರಕ್ಷಣೆಗೆ ಧಾವಿಸಿದ ಸೇನೆ..
ವಯನಾಡು : ಕೇರಳದ ವಯನಾಡ್ ಜಿಲ್ಲೆಯಲ್ಲಿ ಮಂಗಳವಾರ ಬೆಳಗ್ಗೆ ಸಮಭವಸಿದ್ದ ಗುಡ್ಡ ಕುಸಿತ ದುರಂತದಲ್ಲಿ ಸಾವಿನ ಸಂಖ್ಯೆ 90 ಗಡಿ ದಾಟಿದೆ. ರಕ್ಷಣಾ ಕಾರ್ಯಕ್ಕೆ ಮಳೆ ಅಡ್ಡಿಯಾಗಿದ್ದು ಇನ್ನು 2 ದಿನ ವಯನಾಡು ಮತ್ತು ಸುತ್ತಮುತ್ತಲ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.
ವಯನಾಡಿನ ಚೂರಲ್‌ಮಲ ಮತ್ತು ಮುಂಡಕೈ ಪ್ರದೇಶದಲ್ಲಿ ಗುಡ್ಡ ಕುಸಿದಿಂದ ಇಡೀ ಪ್ರದೇಶವೇ ನೆಲಸಮವಾಗಿದೆ. ಮನುಷ್ಯನಿಗಿಂತ ಎತ್ತರದ ಬೃಹತ್ ಬಂಡೆಗಳು, ಕುಸಿದ ಕಟ್ಟಡಗಳು, ಸುತ್ತಲೂ ಮಣ್ಣು, ಕೆಸರುಮಯ.. ರಭಸದಲ್ಲಿ ಮುನ್ನುಗ್ಗುತ್ತಿರುವ ಪ್ರವಾಹ ನೋಡುಗರ ಎದೆ ಝಲ್ ಎಣಿಸುತ್ತಿದೆ. ಇನ್ನು ಸುಮಾರು 250 ಮಂದಿ ಸಿಲುಕಿದ್ದು ಅನೇಕ ಮೃತ ದೇಹಗಳು ದುರಂತ ಸ್ಥಳದಿಂದ ಮೃತದೇಹಗಳು ಚಾಲಿಯಾರ್ ನದಿ ಮೂಲಕ ಸಮೀಪದ ಜಿಲ್ಲೆ ಮಲಪ್ಪುರಂಗೆ ಕೊಚ್ಚಿ ಹೋಗಿದೆ. ವಾಯು ಪಡೆ ಹೆಲಿಕಾಪ್ಟರ್ ಗಳ ಬಳಸಲಾಗುತ್ತಿದೆಯಾದ್ರೂ ಪ್ರತಿಕೂಲ ಹವಾಮಾನದಿಂದ ರಕ್ಷಣಾ ಸಿಬ್ಬಂದಿಗೆ ಇನ್ನೂ ದುರಂತದ ಸ್ಥಳಕ್ಕೆ ತಲುಪಲು ಸಾಧ್ಯವಾಗಿಲ್ಲ.
ಮುಂಡಕೈ ಒಂದರಲ್ಲೇ ಸುಮಾರು 100 ಕುಟುಂಬಗಳು ದುರಂತಕ್ಕೆ ಸಿಲುಕಿವೆ. ಸಿಕ್ಕಿಬಿದ್ದವರಲ್ಲಿ ವಿದೇಶಿಗರೂ ಇರುವ ಶಂಕೆ ಇದೆ. ಚೂರಲ್‌ಮಲದಲ್ಲಿ ಶಾಲೆಯೊಂದು ಮಳೆ ನೀರಿಗೆ ಕೊಚ್ಚಿ ಹೋಗಿದೆ. ಭೂಕುಸಿತದಿಂದ ಸೇತುವೆ ಕುಸಿದರೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಸೇನೆಯ ಎಂಜಿನಿಯರಿಂಗ್ ತಂಡ ಕರ್ನಾಟಕದಿಂದ ಆಗಮಿಸುವ ಮೂಲಕ ಈ ಭಾಗದ ಜತೆಗಿನ ಸಂಬಂಧವನ್ನು ಮರುಸ್ಥಾಪಿಸಲು ಹಾಗೂ ರಕ್ಷಣಾ ಕಾರ್ಯಾಚರಣೆಗೆ ಮುಂದಾಗಬಹುದು ಎಂಬ ನಿರೀಕ್ಷೆ ಇದೆ.