Connect with us

National

ಕೇರಳದ ಅಕ್ರಮ ಚಿನ್ನ ಸಾಗಾಟಕ್ಕೆ ಉಗ್ರರ ಲಿಂಕ್……

ತಿರುವನಂತಪುರ,ಜುಲೈ 13: ಕೇರಳದಲ್ಲಿ ಬೆಳಕಿಗೆ ಬಂದ ಅಕ್ರಮ ಚಿನ್ನದ ಕಳ್ಳಸಾಗಣಿಕೆ ಪ್ರಕರಣದ ಹಿಂದಿನ ಹಲವು ಸ್ಪೋಟಕ ಮಾಹಿತಿಗಳು ಇದೀಗ ಬೆಳಕಿಗೆ ಬರುತ್ತಿದೆ. ಪ್ರಕರಣದ ತನಿಖೆಯನ್ನು ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ ಪ್ರಕರಣದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್ ಹಾಗೂ ಆಕೆಯ ನಿಟಕವರ್ತಿಗಳನ್ನು ವಶಕ್ಕೆ ಪಡೆದುಕೊಂಡಿದೆ.

ಬೆಂಗಳೂರಿನಲ್ಲಿ ಈ ಇಬ್ಬರನ್ನು ವಶಕ್ಕೆ ಪಡೆದುಕೊಂಡಿರುವ ರಾಷ್ಟ್ರೀಯ ತನಿಖಾ ದಳ ಪ್ರಕರಣದ ಹಿಂದಿನ ರಹಸ್ಯಗಳನ್ನು ಎಳೆ ಎಳೆಯಾಗಿ ಬಿಡಿಸಲಾರಂಭಿಸಿದೆ. ರಾಷ್ಟ್ರೀಯ ತನಿಖಾ ದಳ ಇಂದು ಎನ್.ಐ.ಎ ಕೋರ್ಟ್ ಗೆ ಸಲ್ಲಿಸಿದ ವರದಿಯಲ್ಲಿ ಆರೋಪಿ ಸ್ವಪ್ನಾ ಸುರೇಶ್ ಹಾಗೂ ಆಕೆಯ ತಂಡ ಅಕ್ರಮ ಚಿನ್ನ ಸಾಗಾಟಕ್ಕಾಗಿ ಯುಎಇ ರಾಯಭಾರಿ ಕಛೇರಿಯ ನಕಲಿ ಸೀಲ್ ಹಾಗೂ ಸಿಂಬಲ್ ಬಳಸುತ್ತಿರುವ ಮಾಹಿತಿ ಹೊರ ಹಾಕಿದೆ.

ಅಲ್ಲದೆ ಗಲ್ಫ್ ರಾಷ್ಟ್ರಗಳಿಂದ ಭಾರತಕ್ಕೆ ತರಲಾಗುತ್ತಿದ್ದ ಕೆ.ಜಿ ಗಟ್ಟಲೆ ಚಿನ್ನ ಇಲ್ಲಿನ ಚಿನ್ನಾಭರಣ ಮಳಿಗೆಗೆ ಬಳಸಲಾಗುತ್ತಿರಲಿಲ್ಲ ಎನ್ನುವ ಅಚ್ಚರಿಯ ಅಂಶವನ್ನೂ ಬಯಲಿಗೆಳೆದಿದೆ. ಗಲ್ಫ್ ರಾಷ್ಟ್ರಗಳಿಂದ ಬರುತ್ತಿದ್ದ ಎಲ್ಲಾ ಚಿನ್ನಗಳೂ ದೇಶದಲ್ಲಿ ಉಗ್ರ ಚಟುವಟಿಕೆಗಳಿಗೆ ಬಳಸಲಾಗುತ್ತಿತ್ತು ಎನ್ನುವ ಸ್ಪೋಟಕ ಮಾಹಿತಿಯನ್ನೂ ರಾಷ್ಟ್ರೀಯ ತನಿಖಾ ದಳ ಕೋರ್ಟ್ ಗೆ ಸಲ್ಲಿಸಿದೆ.

ಬೆಂಗಳೂರಿನಲ್ಲಿ ಪತ್ತೆಯಾಗಿದ್ದ ಸ್ವಪ್ನಾ ಸುಂದರ್ ಒಂದು ವೇಳೆ ತನಿಖಾಧಿಕಾರಿಗಳು ಬೆಂಗಳೂರಿಗೆ ತಲುಪುದು ಒಂದು ದಿನ ತಡವಾಗಿದ್ದರೂ, ಆಕೆ ನಾಗಾಲ್ಯಾಂಡ್ ಗೆ ತೆರಳುವ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದಳು ಎನ್ನುವ ವಿಚಾರವೂ ತಿಳಿದು ಬಂದಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *