LATEST NEWS
ವಯನಾಡ್ ಭೂಕುಸಿತದ ಬಗ್ಗೆ ಅಧ್ಯಯನ ವರದಿ ಮಾಡದಂತೆ ವಿಜ್ಞಾನಿಗಳಿಗೆ ಕೇರಳ ಸರಕಾರದ ನಿರ್ಬಂಧ
ತಿರುವನಂತಪುರಂ ಅಗಸ್ಟ್ 02: ಭೀಕರ ಭೂಕುಸಿತದ ದುರಂತಕ್ಕೆ ಒಳಗಾಗಿರುವ ವಯನಾಡ್ ನ ಸ್ಥಿತಿ ಬಗ್ಗೆ ಯಾವುದೇ ರೀತಿಯ ಅಧ್ಯಯನ ವರದಿ ಮಾಡದಂದೆ ವಿಜ್ಞಾನಿಗಳಿಗೆ ಕೇರಳ ಸರಕಾರ ನಿರ್ಬಂಧ ಹೇರಿದೆ.
ರಾಜ್ಯ ಪರಿಹಾರ ಆಯುಕ್ತ ಮತ್ತು ವಿಪತ್ತು ನಿರ್ವಹಣೆಯ ಪ್ರಧಾನ ಕಾರ್ಯದರ್ಶಿ ಟಿಕು ಬಿಸ್ವಾಲ್ ಅವರು ಕೇರಳದ ಎಲ್ಲಾ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಗಳಿಗೆ ವಿಪತ್ತು ಎಂದು ಗುರುತಿಸಲಾಗಿರುವ ವಯನಾಡಿನ ಮೆಪ್ಪಾಡಿ ಪಂಚಾಯತ್ ವ್ಯಾಪ್ತಿಯ ಜಾಗಗಳಿಗೆ ಭೇಟಿ ನೀಡದಂತೆ ನಿರ್ಬಂಧ ಹೇರಿದ್ದಾರೆ.
ಅಲ್ಲದೆ ವಯನಾಡ್ ಭೂಕುಸಿತದ ಕುರಿತು ತಮ್ಮ ಅಭಿಪ್ರಾಯಗಳನ್ನು ಮತ್ತು ಅಧ್ಯಯನ ವರದಿಗಳನ್ನು ಸರ್ಕಾರದ ಅನುಮತಿ ಇಲ್ಲದೇ ಮಾಧ್ಯಮಗಳೊಂದಿಗೆ ಹಂಚಿಕೊಳ್ಳಬಾರದು ಎಂದು ಕೇರಳ ಸರ್ಕಾರ ವಿಜ್ಞಾನಿಗಳಿಗೆ ನಿರ್ಬಂಧ ಹೇರಿದೆ. ಸಾಮಾಜಿಕ ಜಾಲತಾಣದಲ್ಲಿ ಭಾರೀ ವಿರೋಧ ವ್ಯಕ್ತವಾದ ಬಳಿಕ ಇದೀಗ ಆದೇಶ ಹಿಂಪಡೆದಿದೆ ಎಂದು ಹೇಳಲಾಗಿದೆ