LATEST NEWS
ಹೆಲ್ಮೆಟ್ ನಿಂದಾಗಿ ರಣಜಿ ಫೈನಲ್ ತಲುಪಿದ ಕೇರಳ

ಅಹಮದಾಬಾದ್ ಫೆಬ್ರವರಿ 21: ಹೆಲ್ಮೆಟ್ ನಿಂದಾಗಿ ಕೇರಳ ಕ್ರಿಕೆಟ್ ತಂಡ ರಣಜಿ ಟ್ರೋಫಿ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಫೈನಲ್‌ಗೆ ಪ್ರವೇಶಿಸಿದೆ.
ಅಹಮದಾಬಾದ್‌ನಲ್ಲಿ ಗುಜರಾತ್ ವಿರುದ್ಧ ನಡೆದ ಸೆಮಿಫೈನಲ್ ಪಂದ್ಯ ‘ಡ್ರಾ’ದಲ್ಲಿ ಅಂತ್ಯಗೊಂಡಿದೆ. ಆದರೆ ಈ ಪಂದ್ಯಾಟದಲ್ಲಿ ಕೊನೆಯ ವಿಕೆಟ್ ಕಳೆದುಕೊಂಡ ರೀತಿ ಮಾತ್ರ ಭಾರೀ ಸಾರಸ್ಯಕರವಾಗಿತ್ತು,
ಕೇರಳ ಮತ್ತು ಗುಜರಾತ್ ನಡುವೆ ನಡೆದ ಮ್ಯಾಚ್ ನಲ್ಲಿ ಕೇರಳದ 457 ರನ್‌ಗಳಿಗೆ ಉತ್ತರವಾಗಿ ಗುಜರಾತ್ ಒಂದು ಹಂತದಲ್ಲಿ ಮುನ್ನಡೆ ಗಳಿಸಲಿದೆ ಎಂದೇ ಭಾವಿಸಲಾಗಿತ್ತು. ಆದರೆ ಕೊನೆಯ ದಿನವಾದ ಇಂದು 455 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು.

ಮೊದಲ ಇನಿಂಗ್ಸ್‌ನಲ್ಲಿ ಮಹತ್ವದ ಎರಡು ರನ್ ಅಂತರದ ಮುನ್ನಡೆ ಕಾಯ್ದುಕೊಂಡಿರುವ ಕೇರಳ, 68 ವರ್ಷಗಳ ಬಳಿಕ ದೇಶೀಯ ಟೂರ್ನಿಯಲ್ಲಿ ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟಿದೆ. ಕೊನೆಯ ವಿಕಟ್ ಬಿದ್ದ ರೀತಿ ಮಾತ್ರ ಸೂಪರ್ ಆಗಿತ್ತು, ಕೇರಳ ಸ್ಪಿನ್ನರ್ ಆದಿತ್ಯ ಸರ್‌ವಟೆ ದಾಳಿಯಲ್ಲಿ ಗುಜರಾತ್ ಬ್ಯಾಟರ್ ಅರ್ಜಾನ್ ನಾಗ್‌ವಾಸ್‌ವಾಲಾ ದೊಡ್ಡ ಹೊಡೆತಕ್ಕೆ ಯತ್ನಿಸಿದರು. ಆದರೆ ಚೆಂಡು ನೇರವಾಗಿ ಶಾರ್ಟ್ ಲೆಗ್‌ನಲ್ಲಿ ಕ್ಷೇತ್ರ ರಕ್ಷಣೆ ಮಾಡುತ್ತಿದ್ದ ಸಲ್ಮಾನ್ ನಿಜಾರ್ ಅವರ ಹೆಲೈಟ್‌ಗೆ ಬಡಿದು ಮೇಲಕ್ಕೆ ಚಿಮ್ಮಿತು. ಕ್ಷಣಾರ್ಧದಲ್ಲಿ ವಿಕೆಟ್ ಕೀಪರ್ ಬಳಿ ಸ್ಲಿಪ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ನಾಯಕ ಸಚಿನ್ ಬೇಬಿ ಚೆಂಡನ್ನು ಭದ್ರವಾಗಿ ತಮ್ಮ ಕೈಯೊಳಗೆ ಸೇರಿಸಿದರು. ಕೆಲವೇ ಕ್ಷಣದಲ್ಲಿ ಕೇರಳದ ಪಾಳಯದಲ್ಲಿ ಸಂಭ್ರಮ ಮನೆ ಮಾಡಿತು. ಮತ್ತೊಂದೆಡೆ ಗುಜರಾತ್‌ಗೆ ಅದೃಷ್ಟ ಕೈಕೊಟ್ಟಿತು.
1⃣ wicket in hand
2⃣ runs to equal scores
3⃣ runs to secure a crucial First-Innings LeadJoy. Despair. Emotions. Absolute Drama!
Scorecard ▶️ https://t.co/kisimA9o9w#RanjiTrophy | @IDFCFIRSTBank | #GUJvKER | #SF1 pic.twitter.com/LgTkVfRH7q
— BCCI Domestic (@BCCIdomestic) February 21, 2025