Connect with us

LATEST NEWS

ಮಚ್ಚು ಹಿಡಿದು ದಾಳಿ ಮಾಡಿದ್ದ ದುಷ್ಕರ್ಮಿಯನ್ನು ಬರಿಗೈಯಲ್ಲಿ ಬಗ್ಗುಬಡಿದ ಪೊಲೀಸ್ ಅಧಿಕಾರಿ

ಕೇರಳ : ದುಷ್ಕರ್ಮಿಯೊಬ್ಬ ಮಚ್ಚು ಹಿಡಿದು ಪೊಲೀಸ್ ಅಧಿಕಾರಿಯೊಬ್ಬರ ಮೇಲೆ ದಾಳಿ ಮಾಡಲು ಮುಂದಾಗಿದ್ದರು, ಧೈರ್ಯದಿಂದ ಬರಿಗೈಯಲ್ಲಿ ದುಷ್ಕರ್ಮಿಯನ್ನು ಎದುರಿಸಿದ ವಿಡಿಯೋ ಒಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಘಟನೆ ಕೇರಳದ ಕಾಯಂಕುಲಂ ಬಳಿಯ ಪಾರಾ ಜಂಕ್ಷನ್ ನಲ್ಲಿ ಈ ಘಟನೆ ನಡೆದಿದೆ.


ದ್ವಿಚಕ್ರ ವಾಹನದಲ್ಲಿದ್ದ ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ, ಈ ವೇಳೆ ಅಲ್ಲಿಗೆ ಬಂದ ಪೊಲೀಸ್ ಅಧಿಕಾರಿ ಈತನ ಚಲನವಲನವನ್ನು ನೋಡಿ ಅನುಮಾನಗೊಂಡಿದ್ದರು. ಇತ್ತ, ಈ ಪೊಲೀಸ್ ಅಧಿಕಾರಿ ವಾಹನದಿಂದ ಇಳಿಯುತ್ತಿದ್ದಂತೆಯೇ ತನ್ನ ದ್ವಿಚಕ್ರ ವಾಹನದಲ್ಲಿದ್ದ ಮಚ್ಚನ್ನು ತೆಗೆದ ಈ ಪಾತಕಿ ದಾಳಿ ಮಾಡಿ ಎಸ್ಕೇಪ್ ಆಗಲು ಯತ್ನಿಸಿದ್ದ. ಆದರೆ, ಈ ವೇಳೆ ಧೃತಿಗೆಡದೆ ಅರೆಕ್ಷಣವೂ ವ್ಯರ್ಥ ಮಾಡದೆ ಈ ಅಧಿಕಾರಿ ಈ ಪಾತಕಿಯನ್ನು ತಡೆದಿದ್ದರು. ಜತೆಗೆ, ಬರಿಗೈಯಲ್ಲಿ ಈತನನ್ನು ನೆಲಕ್ಕುರುಳಿಸಿ ಮಚ್ಚನ್ನು ಕಸಿದಿದ್ದರು. ಈ ದೃಶ್ಯ ಅಲ್ಲೇ ಇದ್ದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಈ ವಿಡಿಯೋವನ್ನು ಭಾರತೀಯ ಪೊಲೀಸ್ ಸೇವಾ ಅಧಿಕಾರಿ ಸ್ವಾತಿ ಲಾಕ್ರಾ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. “ನಿಜವಾದ ಹೀರೋ ಹೇಗಿರುತ್ತಾರೆ… ಕೇರಳದ ಈ ಪೊಲೀಸ್ ಸಬ್ ಇನ್ಸ್ ಪೆಕ್ಟರ್‌ಗೆ ವಂದನೆಗಳು.” ಎಂದು ವಿಡಿಯೋ ಹಂಚಿಕೊಂಡು ಟ್ವೀಟ್ ಮಾಡಿದ್ದಾರೆ.

Advertisement
Click to comment

You must be logged in to post a comment Login

Leave a Reply