Connect with us

LATEST NEWS

ಮರದಲ್ಲಿ ಜೋತು ಬಿದ್ದು ಪೋಟೋ ತೆಗೆದು ವೈರಲ್ ಆದ ಪೋಟೋಗ್ರಾಫರ್

ಮರದಲ್ಲಿ ಜೋತು ಬಿದ್ದು ಪೋಟೋ ತೆಗೆದು ವೈರಲ್ ಆದ ಪೋಟೋಗ್ರಾಫರ್

ತಿರುವನಂತಪುರ ಎಪ್ರಿಲ್ 21: ಮರದಲ್ಲಿ ನೇತಾಡಿದ ಪೋಟೋ ಗ್ರಾಫರ್ ನ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಮದುವೆ ಪೋಟೋಗಳು ಸಾಮಾನ್ಯವಾಗಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತವೆ. ಆದರೆ ಈ ಬಾರಿ ಮಾತ್ರ ವೈರಲ್ ಆಗುವ ಸರದಿ ಪೋಟೋಗ್ರಾಫರ್ ನದು.

ಈ ಘಟನೆ ನಡೆದಿದ್ದು ಕೇರಳದಲ್ಲಿ, ವಿಡಿಯೋದಲ್ಲಿ ಮಲಯಾಳಂ ಮಾತನಾಡುತ್ತಾ, ನಗುವುದನ್ನು ಗಮನಿಸಬಹುದು.

ವಧು-ವರರ ಫೋಟೋ ತೆಗೆಯುತ್ತಿರೋ ಫೋಟೋಗ್ರಾಫರ್, ಬಳಿಕ ಫೋಟೋವನ್ನು ವಿವಿಧ ಭಂಗಿಗಳಲ್ಲಿ ತೆಗೆಯಲೆಂದು ಮರವೇರುತ್ತಾರೆ. ನಂತ್ರ ಮರದ ಕೊಂಬೆಗೆ ಕಾಲುಗಳಿಂದ ಜೋತು ಬಿದ್ದು ತೆಗೆದಿದ್ದಾರೆ.

ವಧು-ವರರು ಕೆಳಗೆ ನಿಂತು, ಫೋಟೋಗ್ರಾಫರ್ ಜೋತು ಬಿದ್ದು ಫೋಟೋ ತೆಗೆಯುತ್ತಿರುವ ದೃಶ್ಯವನ್ನು ಅಲ್ಲೇ ಇದ್ದ ವ್ಯಕ್ತಿಯೊಬ್ಬರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ. ಈ ವಿಡಿಯೋವನ್ನು ನವದಂಪತಿಗಳು ಫೇಸ್ ಬುಕ್ ಮತ್ತು ಇನ್ ಸ್ಟಾಗ್ರಾಮ್ ನಲ್ಲಿ ಹಾಕಿದ ತಕ್ಷಣವೇ ಸಾವಿರಾರು ಮಂದಿ ವೀಕ್ಷಿಸಿ ಕಮೆಂಟ್ ಮಾಡಿದ್ದಾರೆ. ಫೋಟೋ ತೆಗೆದಿರುವ ಫೋಟೋಗ್ರಾಫರ್ ನ ಸಾಹಸ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಪ್ರಶಂಸೆ ವ್ಯಕ್ತವಾಗಿದೆ.

ಮರದ ಕೊಂಬೆ ನೆಲದಿಂದ ಸುಮಾರು ಅಡಿಗಳ ಅಂತರದಲ್ಲಿ ಇದೆ. ಜೋತು ಬಿದ್ದ ಫೋಟೋಗ್ರಾಫರ್, ತನ್ನ ಕೈಯಲ್ಲಿ ಕ್ಯಾಮೆರಾ ಹಿಡಿದು ಫೋಟೊ ತೆಗೆಯುವುದರಲ್ಲಿ ಮಗ್ನರಾಗಿದ್ದರು. ಅವರ ಕಾಲುಗಳಷ್ಟೇ ಆಧಾರವಾಗಿತ್ತು. ಒಂದು ವೇಳೆ ಕಾಲುಗಳು ಜಾರಿದಲ್ಲಿ ಇಲ್ಲ ಕೊಂಬೆ ಮುರಿದಲ್ಲಿ ತಲೆಗೆ ಅಪಾಯ ಖಚಿತವಾಗಿತ್ತು ಅಂತಾ ಕೆಲವರು ಭಯ ವ್ಯಕ್ತಪಡಿಸಿದ್ದಾರೆ.

VIDEO

Share Information
Continue Reading
Advertisement
Click to comment

Leave a Reply

Your email address will not be published. Required fields are marked *