LATEST NEWS
ಪಾಲೇಮಾರ್ ಗೆ ಟಿಕೆಟ್ ಸಿಗದೆ ಇರಲು ನಾನು ಕಾರಣನಲ್ಲ – ನಳಿನ್ ಕುಮಾರ್ ಕಟೀಲ್

ಪಾಲೇಮಾರ್ ಗೆ ಟಿಕೆಟ್ ಸಿಗದೆ ಇರಲು ನಾನು ಕಾರಣನಲ್ಲ – ನಳಿನ್ ಕುಮಾರ್ ಕಟೀಲ್
ಮಂಗಳೂರು ಏಪ್ರಿಲ್ 21: ನನ್ನ ಟಿಕೆಟ್ ಕೈ ತಪ್ಪಲು ಸಂಸದ ನಳಿನ್ ಕುಮಾರ್ ಕಾರಣ ಎಂದು ಮಾಜಿ ಸಚಿವ ಪಾಲೇಮಾರ್ ಹೇಳಿಕೆ ಸಂಸದ ನಳಿನ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಅವರಿಗೆ ಟಿಕೆಟ್ ಕೈ ತಪ್ಪವುದರ ಹಿಂದೆ ನನ್ನ ಪಾತ್ರ ಇಲ್ಲ ಎಂದು ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಸ್ಪಷ್ಟ ಪಡಿಸಿದರು.
ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಪಕ್ಷದ ವರಿಷ್ಠರ ತೀರ್ಮಾನದಿಂದ . ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಟೀಮ್ ನಡೆಸಿದ ಸರ್ವೆ ಆಧಾರದಲ್ಲಿ ಟಿಕೆಟ್ ಫೈನಲ್ ಆಗಿದೆ ಎಂದು ಸ್ಪಷ್ಟಪಡಿಸಿದರು. ಪಾಲೇಮಾರ್ ಅವರು ಪಕ್ಷದ ಹಿರಿಯರು , ಟಿಕೆಟ್ ಸಿಗದ ಬೇಸರದಲ್ಲಿ ಈ ರೀತಿ ಮಾತನಾಡಿದ್ದಾರೆ ಎಂದು ತಿಳಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯ 8 ಕ್ಷೇತ್ರಗಳ ಪೈಕಿ 4 ಕ್ಷೇತ್ರಗಳಲ್ಲಿ ಬಂಟ ಸಮುದಾಯದ ಟಿಕೆಟ್ ನೀಡಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಎಲ್ಲಾ ಸಮುದಾಯದ ಜನರು ಬಿಜೆಪಿ ಜೊತೆಗಿದ್ದಾರೆ. ಭಿನ್ನಮತವನ್ನು ಮಾತುಕತೆ ಮೂಲಕ ಶಮನ ಮಾಡಲಾಗುವುದು ಎಂದು ತಿಳಿಸಿದರು.