LATEST NEWS
ಗೋಮಾತಾ ಖಾದ್ಯ – ಸಾಮಾಜಿಕ ಕಾರ್ಯಕರ್ತೆ ರೆಹನಾ ಫಾತಿಮಾ ವಿರುದ್ದ ಕೇರಳ ಹೈಕೋರ್ಟ್ ಗರಂ
ಕೇರಳ : ವಿವಾದಾತ್ಮಕ ಸಾಮಾಜಿಕ ಕಾರ್ಯಕರ್ತೆ ರೆಹನಾ ಫಾತಿಮಾ ವಿರುದ್ದ ಕೇರಳ ಹೈಕೋರ್ಟ್ ಗರಂ ಆಗಿದೆ. ಈಗಾಗಲೇ ತನ್ನ ಬೆತ್ತಲೆ ದೇಹದ ಮೇಲೆ ಮಕ್ಕಳಿಂದ ಚಿತ್ರ ಬಿಡಿಸಿಕೊಂಡು ಜೈಲು ಪಾಲಾಗಿದ್ದ ರೆಹನಾ ಈಗ ಮತ್ತೆ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದು, ಗೋಮಾತೆಯ ಖಾದ್ಯ ಮಾಡಿ, ಅದನ್ನು ತಿಂದು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾರೆ.
ಕೇರಳದ ರೆಹಾನಾ ಫಾತಿಮಾ ತಮ್ಮದೇ ಯೂಟ್ಯೂಬ್ ಚಾನೆಲ್ ಕೂಡ ಹೊಂದಿದ್ದು, ಈಗಾಗಲೇ ಹಲವಾರು ವಿವಾದಿತ ವಿಡಿಯೋಗಳನ್ನು ಮಾಡಿ ಅವರು ಸಂಕಷ್ಟಕ್ಕೆ ಸಿಲುಕಿದ್ದರು. ಆದರೂ ತಮ್ಮ ಚಾಳಿ ಬಿಡದ ಅವರು ಅವರು ಇತ್ತೀಚೆಗೆ ಪೋಸ್ಟ್ ಮಾಡಿದ ವಿಡಿಯೋವೊಂದು ಹಿಂದೂಗಳ ಕೆಂಗಣ್ಣಿಗೆ ಗುರಿಯಾಗಿದೆ
ಫಾತಿಮಾ ಅವರು ಇತ್ತೀಚೆಗೆ ಪೋಸ್ಟ್ ಮಾಡಿದ್ದ ವಿಡಿಯೋದಲ್ಲಿ ಗೋಮಾತಾ ಉಲರ್ಥ್ಹೆಸರಿನ ಖಾದ್ಯ ತಯಾರಿಸುತ್ತಿರುವುದಾಗಿ ಹೇಳಿದ್ದರು. ದೇಶದಲ್ಲಿ ಗೋಮಾತಾ ಎಂದು ಕರೆಯುವುದು ಗೋವುಗಳಿಗೆ ಮಾತ್ರ. ಹಾಗೂ ಆ ಹೆಸರನ್ನು ಹಿಂದೂಗಳು ಅತ್ಯಂತ ಶ್ರೇಷ್ಠ ಭಾವದಿಂದ ನೋಡುತ್ತಾರೆ. ಗೋ ಮಾಂಸದ ಖಾದ್ಯ ತಯಾರಿಸಿದ್ದಷ್ಟೇ ಅಲ್ಲದೆ ಅದಕ್ಕೆ ಗೋಮಾತಾ ಹೆಸರು ಇಟ್ಟಿದ್ದರ ವಿರುದ್ಧ ಅನೇಕ ಹಿಂದೂಗಳು ಧ್ವನಿ ಎತ್ತಿದ್ದರು
ಈ ವಿಚಾರವಾಗಿ ಕೇರಳ ಹೈ ಕೋರ್ಟ್ ವಿಚಾರಣೆ ನಡೆಸಿದೆ. ಯಾವುದೇ ಭಕ್ತನ ಮೂಲಭೂತ ಹಕ್ಕಿನ ಮೇಲೆ ಪರಿಣಾಮ ಬೀರುವಂತೆ ಕೆಲಸ ಮಾಡುವುದು ಕಾನೂನಿನಲ್ಲಿ ಅಪರಾಧವಾಗುತ್ತದೆ. ಇದೀಗ ಫಾತಿಮಾ ಅವರು ಅದೇ ತಪ್ಪನ್ನು ಮಾಡಿದ್ದಾರೆ. ಗೋಮಾತಾ ಎನ್ನುವ ಹೆಸರಿಗೆ ಗೋವಿನ ಅರ್ಥ ಬಿಟ್ಟು ಬೇರೆ ಅರ್ಥ ನಮ್ಮಲ್ಲಿಲ್ಲ ಎಂದು ನ್ಯಾಯಮೂರ್ತಿ ಸುನಿಲ್ ಅವರ ಏಕ-ನ್ಯಾಯಾಧೀಶರ ಪೀಠ ಹೇಳಿದೆ. ಅಲ್ಲದೆ ರೆಹನಾ ಫಾತಿಮಾ ಇವರು ಇನ್ನು ಈ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಮಾಧ್ಯಮಗಳು, ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್ ಮಾಡಬಾರದೆಂದು ನಿರ್ಬಂಧ ವಿಧಿಸಿದೆ.